Advertisement

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

11:19 PM Jan 03, 2025 | Team Udayavani |

ರಾಜ್‌ಕೋಟ್‌: ವಕ್ಫ್ ಮಂಡಳಿಯ ಆದೇಶವೆಂದು ಬೆದರಿಸಿ ಮೂವರು ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಆರೋಪದಡಿ ಮಸೀದಿಯೊಂದರ ಟ್ರಸ್ಟಿ ಸೇರಿದಂತೆ 9 ಜನರನ್ನು ಗುರುವಾರ ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಡಿ.31ರಂದು, ರಾಜ್‌ಕೋಟ್‌ನ ನವಾಬ್‌ ಮಸೀದಿಯ ನೆಲಮಹಡಿಯಲ್ಲಿ ಬಾಡಿಗೆ ಆಧಾರದಲ್ಲಿ ಅಂಗಡಿ ನಡೆಸುತ್ತಿದ್ದ ಹಿಂದೂ ವರ್ತಕರ ಅಂಗಡಿಗೆ ನುಗ್ಗಿದ ಜನರ ಗುಂಪು ಒತ್ತಾಯಪೂರ್ವಕವಾಗಿ ಅಂಗಡಿ ತೆರವುಗೊಳಿಸಿತ್ತು ಎಂದು ಆರೋಪಿಸಲಾಗಿತ್ತು.

ಈ ವೇಳೆ ವರ್ತಕರೊಬ್ಬರು ಗುಂಪಿನ ಕ್ರಮವನ್ನು ಪ್ರಶ್ನಿಸಿದಾಗ, ವಕ್ಫ್ ಮಂಡಳಿಯ ಆದೇಶದನ್ವಯ ನಾವು ಕಾರ್ಯಾಚರಣೆ ನಡೆಸಿದ್ದೇವೆ ಎಂದಿದ್ದರು. ಅಂಗಡಿ ತೆರವಿನ ಕುರಿತು ನೋಟಿಸ್‌ ಲಭಿಸದ್ದರಿಂದ ವರ್ತಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next