Advertisement
ನಗರದ ಖಾಸಗಿ ಬಿಎಡ್ ಉಪನ್ಯಾಸಕರಾಗಿದ್ದ ತಾಲೂಕಿನ ಬೆಂಕಿಪುರ ನಿವಾಸಿ ಯಶೋಧ್ ಕುಮಾರ್ ಹಾಗೂ ನಗರಕ್ಕೆ ಸಮೀಪದ ಹಳೆಯೂರಿನ (ಚಿಕ್ಕಹುಣಸೂರು) ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡವರು.
Related Articles
ಸಹೋದರಿಗೆ ವಾಟ್ಸ್ಯಾಪ್ ಸಂದೇಶ:
ನಾನು ಈಗ ಮದುವೆ ಆಗಿರುವ ಹುಡುಗ ಕೆಟ್ಟವರಲ್ಲ ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ಮದುವೆ ಆಗಬೇಕು ಎಂಬ ಆಸೆ ನಮ್ಮಿಬ್ಬರದ್ದೂ ಆಗಿತ್ತು. ಆದರೆ ನಮ್ಮಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ಹೇಳಿದ್ದರ ಫಲವಾಗಿ ಮನೆಯಲ್ಲಿ ತುಂಬಾ ಗಲಾಟೆ ಆಗಿದ್ದು ನೀನೇ ಪ್ರತ್ಯಕ್ಷವಾಗಿ ನೋಡಿದ್ದೀಯಾ, ಹಾಗಾಗಿ ಮತ್ತೊಮ್ಮೆ ಮನೆಯಲ್ಲಿ ನಮ್ಮಿಬ್ಬರ ಪ್ರೀತಿಯ ವಿಷಯ ಹೇಳಲು ನನಗೆ ಧೈರ್ಯ ಇಲ್ಲ. ಹೇಳಿದ್ದರೂ ನಮ್ಮಿಬ್ಬರ ಕಲ್ಮಶವಿಲ್ಲದ ಪ್ರೀತಿಯ ಒಪ್ಪುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ಸ್ವ ಇಚ್ಛೆಯಂತೆ ಮದುವೆ ಆಗಿದ್ದೇನೆ.
Advertisement
ಇದಕ್ಕೆ ಯಾರ ಬಲವಂತವಾಗಲಿ ಇಲ್ಲ. ನನಗೆ ಅಪ್ಪ, ಅಮ್ಮ, ಹಾಗೂ ನಿನ್ನ ಮೇಲೆ ತುಂಬಾ ಗೌರವವಿದೇ ಹಾಗೇ ಪ್ರೀತಿಯೂ ಇದೇ. ನನ್ನ ಚೆನ್ನಾಗಿ ನೋಡಿಕೊಂಡಿದ್ದೀರಾ ಅದಕ್ಕೆ ನಾನು ಯಾವತ್ತೂ ನಿಮಗೆ ಚಿರಋಣಿ ಆಗಿರುತ್ತೇನೆ. ಅಪ್ಪ, ಅಮ್ಮ ಎಲ್ಲರನ್ನು ನೀನು ಚೆನ್ನಾಗಿ ನೋಡಿಕೋ ನಿಮ್ಮೆಲ್ಲರ ಆಶೀರ್ವಾದ ನಮ್ಮಿಬ್ಬರ ಮೇಲೆ ಸದಾಕಾಲ ಇರಲಿ. ನಾವಿಬ್ಬರು ಮುಂದೆ ಎಲ್ಲಾದ್ರೂ ಹೋಗಿ ಜೀವನ ಮಾಡುತ್ತೇವೆ.ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೋ ಸಹೋದರಿಗೆ ಮನವಿ:
ನಿನಗಾಗಲಿ, ನಮ್ಮ ಮನೆಯವರಿಗಾಗಲಿ ಕೆಟ್ಟದ್ದು ಮಾಡುವ ಉದ್ದೇಶದಿಂದ ನಾನು ಪೊಲೀಸ್ ಸ್ಟೇಷನ್ಗೆ ದೂರು ನೀಡುತ್ತಿಲ್ಲಾ ಅಪ್ಪನ ಮೇಲಿನ ಭಯದಿಂದ ನಮ್ಮಿಬ್ಬರ ರಕ್ಷಣೆಗೋಸ್ಕರ ನಾನು ಪೊಲೀಸ್ ಸ್ಟೇಷನ್ ಅಲ್ಲಿ ದೂರು ಸಲ್ಲಿಸುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಅಪ್ಪ, ಅಮ್ಮ, ಪಾಪು, ಎಲ್ಲರನ್ನು ಚೆನ್ನಾಗಿ ನೀನು ನೋಡಿಕೋ ಅಕ್ಕಾ ಎಂದು ತನ್ನ ಸಹೋದರಿಗೆ ವ್ಯಾಟ್ಸಪ್ ಮೂಲಕ ಪೂರ್ಣಿಮಾ ಮನವಿ ಮಾಡಿಕೊಂಡಿದ್ದಾಳೆ.