Advertisement
ಕಳೆದ ಕೆಲ ವರ್ಷಗಳಲ್ಲಿ ಕೊಡಗು, ಕಳಸ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ, ಗುಡ್ಡ ಕುಸಿದು ಅದೆಷ್ಟೋ ಅನಾಹುತಗಳು ಸಂಭವಿಸಿ, ಹಲವು ಮನೆಗಳು ಮಣ್ಣಿನಡಿ ಸಿಲುಕಿ ಅದೆಷ್ಟೋ ಪ್ರಾಣಿಗಳು, ಮನುಷ್ಯರು ಅಸುನೀಗಿದ್ದಾರೆ. ಆದರೆ ಇದೀಗ ನಮ್ಮ ಜಿಲ್ಲೆಯಲ್ಲಿಯೇ ಹಲವು ಪ್ರದೇಶಗಳಲ್ಲಿ ಇಂತಹ ಘಟನೆಗಳು ಸಂಭವಿಸಿದೆ ಹಾಗೂ ಸಂಭವಿಸುತ್ತಲೇ ಇವೆ. ಇದಕ್ಕೆಲ್ಲಾ ಕಾರಣವೇನೆಂದು ಯೋಚಿಸಿದಾಗ ಅತಿ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಜತೆಗೆ ಮಾನವನ ಸ್ವಾರ್ಥವೂ ಕೂಡಿದೆ.
Related Articles
Advertisement
ಕೆಲಮೊಮ್ಮೆ ಗುಡ್ಡವನ್ನು ಕಡಿಯುವುದು ಅನಿವಾರ್ಯವೂ ಹೌದು. ಆದರೆ ಅದನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕಾರ್ಯ ರೂಪಕ್ಕೆ ತರುವುದು ಬಹಳ ಮುಖ್ಯ.. ಇಲ್ಲದಿದ್ದರೆ ಮಳೆಗಾಲದಲ್ಲಿ ಇಂತಹ ಘಟನೆಗಳು,ಅನಾಹುತಗಳು, ಜೀವಹಾನಿಗಳು ಹೆಚ್ಚೆಚ್ಚು ಸಂಭವಿಸುತ್ತಲೇ ಇರುತ್ತದೆ.
-ಕಾವ್ಯಾ ಹೆಗಡೆ
ವಾನಳ್ಳಿ