Advertisement

UV Fusion: ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಬೆಳೆಸೋಣ

03:00 PM Nov 24, 2024 | Team Udayavani |

ಹಿಂದಿನ ಕಾಲದ ಸಾಂಪ್ರದಾಯಿಕ ಕರಕುಶಲ ಕಲೆಗಳು ಇಂದು ಮರೆಮಾಗಿ ಹೋಗಿದೆ. ಇಂದು ಕರಕುಶಲ ಕಲೆಯನ್ನು ಬೆಳೆಸುವವರು ಇದ್ದರೂ ಅದಕ್ಕೆ ಬೇಡಿಕೆಯೇ ಇಲ್ಲವಾಗಿದೆ. ಇದಕ್ಕೆ ಕಾರಣ ಆಧುನಿಕತೆ.

Advertisement

ಹಿಂದೆ ಅನ್ನವನ್ನು ಬಸಿಯಲು ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ನಿರ್ಮಿಸಿದ ವಸ್ತುಗಳನ್ನು ಬಳಸುತ್ತಿದ್ದರು. ಆಡು ಭಾಷೆಯಲ್ಲಿ ತಟ್ಟಿ ಕುಡುಪು ಎಂದು ಕರೆಯಲಾಗುತ್ತದೆ. ಹೀಗೆ ಕನ್ನಡಿ ಬುಟ್ಟಿ, ಗೊಬ್ಬರ ಬುಟ್ಟಿ ಮುಂತಾದ ಬುಟ್ಟಿಗಳನ್ನು ತಯಾರಿಸುತ್ತಿದ್ದರು. ಅಂದಿನ ಕಾಲದಲ್ಲಿ ಇದು ಜೀವನ ಸಾಗಿಸಲು ಮುಖ್ಯಮಾರ್ಗವಾಗಿತ್ತು. ಈ ಬುಟ್ಟಿಗಳನ್ನು ಯಾವುದೇ ಕಾಲದಲ್ಲಾದರೂ ತಯಾರಿಸಬಹುದಾಗಿತ್ತು. ಹಾಗೆಯೇ ಅಂದು ಮಣ್ಣಿನ ಮಡಕೆ ಇದ್ದು ಅದರಲ್ಲಿ ನೀರು ತುಂಬಿಸಿಟ್ಟರೆ, ಇಂದಿನ ರೆಫ್ರಿಜರೇಟರ್‌ನ ನೀರಿಗಿಂತ ಏನೂ ಕಡಿಮೆ ಇಲ್ಲ. ಆದರೆ ಇಂದಿನ ಜನರು ಮಣ್ಣಿನ ಮಡಕೆ, ಬುಟ್ಟಿ ಮುಂತಾದ ಸಾಂಪ್ರದಾಯಿಕ ಕಲೆಗಳನ್ನು ಕಡೆಗಣಿಸಿಬಿಟ್ಟಿದ್ದಾರೆ. ಇವು ಕೆಲವು ಅಂಗಡಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದು, ಯಾರು ಖರೀದಿಸಲು ಮುಖ ಮಾಡುತ್ತಿಲ್ಲ. ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.  ಮಣ್ಣಿನ ಮಡಕೆಯ ಪಾತ್ರೆಗಳನ್ನು ಬಳಸುವುದರಿಂದ ಆರೋಗ್ಯಕ್ಕೂ ಉತ್ತಮ. ಹಾಗೆಯೇ ಇಂತಹ ಕಲೆಗಳನ್ನು ಬೆಳೆಸುವವರಿಗೆ ಪ್ರೋತ್ಸಾಹ ಮತ್ತು ಅವರ ಶ್ರಮಕ್ಕೆ ಬೆಲೆ ನೀಡಿದಂತಾಗುತ್ತದೆ. ಇನ್ನಾದರೂ ಇಂತಹ ಕಲೆಗಳನ್ನು  ಗೌರವಿಸೋಣ.

-ಪ್ರಜ್ಞಾ ಆಚಾರ್ಯ

ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next