Advertisement
ವರ್ಷಕ್ಕೊಂದು ಬಾರಿ ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡಿ, ರಸ್ತೆ ಬದಿ, ಸಮುದ್ರ ತೀರದ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕಿ ಬಳಿಕ ಗುಂಪಿನ ಒಂದು ಸ್ಟೇಟಸ್ ಹಾಕಿ ಮತ್ತೆ ಆ ಗಿಡ ನೋಡುವುದು ಒಂದು ವರ್ಷದ ಬಳಿಕವು ಆಗಿರಬಹುದು.
Related Articles
Advertisement
ಮೆಕ್ಕೆಜೋಳದ ಕವರ್
ಯಾವುದೇ ಅಂಗಡಿಗಳಲ್ಲಿ ಸಣ್ಣಪುಟ್ಟ ವಸ್ತು ಖರೀದಿ ಮಾಡಿದರೂ ಒಂದು ಕವರ್ ನೀಡುತ್ತಾರೆ. ಇತ್ತೀಚೆಗೆ ಕಾಗದದ ಕವರ್ ಹೆಚ್ಚು ಚಾಲ್ತಿಯಲ್ಲಿ ಇದೆ. ಆದರೆ ಕಾಗದ ಮತ್ತು ಬಟ್ಟೆ ಚೀಲ ಬಳಕೆ ದುಬಾರಿ ಎಂಬ ಪರಿಕಲ್ಪನೆ ಇದ್ದು ಈಗಲೂ ಪ್ಲಾಸ್ಟಿಕ್ ತೊಟ್ಟೆಗಳು ಅಲ್ಲಲ್ಲಿ ರಾರಾಜಿಸುತ್ತಲೇ ಇವೆ.
ಹೀಗಾಗಿ ಪರಿಸರಕ್ಕೆ ಪೂರಕ ಆಗುವ ಮೆಕ್ಕೆಜೋಳದ ಕವರ್ ಎಲ್ಲೆಡೆ ಬಳಸಿದರೆ ಪ್ಲಾಸ್ಟಿಕ್ ಕವರ್ ನಂತೆ ಉಪಯೋಗ ಆಗುವ ಜತೆಗೆ ಮಣ್ಣಿನಲ್ಲಿ ಕರಗಿ ಲೀನವಾಗಲಿದೆ. ಹೆಸರೇ ಹೇಳುವಂತೆ ಇದನ್ನು ಮೆಕ್ಕೆಜೋಳದಿಂದ ತಯಾರಿಸಲಾಗಿದೆ. ಪಾರದರ್ಶಕವಾಗಿದ್ದು ನೋಡಲು ಸಂಪೂರ್ಣ ಪ್ಲಾಸ್ಟಿಕ್ ನಂತೆಯೇ ಇರಲಿದೆ.
ಎಷ್ಟು ಕಾಲ ಬಳಕೆ ಮಾಡಬಹುದು?
ಈಗಾಗಲೇ ಅನೇಕ ಕಂಪೆನಿಗಳು ಈ ಮೆಕ್ಕೆಜೋಳದಿಂದ ಹಾಗೂ ಇತರ ಮೂಲದಿಂದ ಬಯೋ ಪ್ಲಾಸ್ಟಿಕ್ ತಯಾರಿಸುತ್ತಿದ್ದು ಇವುಗಳನ್ನು 5-6ತಿಂಗಳ ಕಾಲ ಬಳಕೆ ಮಾಡಬಹುದು. ಇದರ ಬೆಲೆ ಕೂಡ ಮಾರುಕಟ್ಟೆಯ ಪ್ಲಾಸ್ಟಿಕ್ ಬೆಲೆಗೆ ಸಮವಾಗಿದೆ. ಈಗ ಆರಂಭದ ಹಂತವಾದ ಕಾರಣ ಸಾಮಾನ್ಯ ಪ್ಲಾಸ್ಟಿಕ್ ಬೆಲೆಗಿಂತ 5 ರೂಪಾಯಿ ನಂತೆ ವ್ಯತ್ಯಾಸಾತ್ಮಕ ಬೆಲೆ ಇದರಲ್ಲಿ ಇರಲಿದೆ.
ಎಂದಿಗೂ ತ್ಯಾಜ್ಯವಾಗಲಾರದು?
ಪ್ಲಾಸ್ಟಿಕ್ ಉತ್ಪಾದನಾ ಮಟ್ಟ ಏರುತ್ತಲಿದೆ. ಆದರೆ ಬಳಕೆಯಾದ ಪ್ಲಾಸ್ಟಿಕ್‌ಗಳು ಮುಕ್ತಿ ಕಾಣದೆ ಕಸವಾಗಿ ಪರಿವರ್ತನೆಗೊಳಪಟ್ಟಿದೆ. ಹೀಗಾಗಿ ಪ್ಲಾಸ್ಟಿಕ್ ಎನ್ನುವುದು ತ್ಯಾಜ್ಯವಾಗಿ ಮಾರ್ಪಡುತ್ತಿದೆ. ಆದರೆ ಈ ಬಯೋ ಪ್ಲಾಸ್ಟಿಕ್ ನಲ್ಲಿ ಮೆಕ್ಕೆಜೋಳದ ಕವರ್ ಅನ್ನು ನಮ್ಮ ದೈನಿಕ ಬದುಕಿನ ಭಾಗವಾಗಿ ಅಳವಡಿಸಿಕೊಂಡರೆ ಇವುಗಳು ಪರಿಸರಕ್ಕೆ ಹಾನಿತರಲಾರವು. 90-180ದಿನದಲ್ಲಿ ಗೊಬ್ಬರವಾಗಲಿದೆ.
ಹಾಗಾಗಿ ಗಿಡದ ಪೋಷಣೆಗೆ ಬಳಸಬಹುದು, ಹಸು ಅಥವಾ ಜಲಚರ ಜೀವಿಗೆ ಆಹಾರದಂತೆ ಬಳಕೆ ಆಗಲಿದೆ. ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ರಾಷ್ಟ್ರಕ್ಕೆ ಇಂತಹ ಆವಿಷ್ಕಾರಗಳ ಶೀಘ್ರ ಗತಿಯ ಬೆಳವಣಿಗೆ ಕಾಣುವುದು ಅತ್ಯವಶ್ಯಕವಾಗಿವೆ.
-ರಾಧಿಕಾ ,
ಕುಂದಾಪುರ