Advertisement

26/11ರ ಉಗ್ರ ದಾಳಿಗೆ 10 ವರ್ಷ: ಭಾರತದ ಬೆಂಬಲಕ್ಕೆ ಅಮೆರಿಕ

11:03 AM Nov 27, 2018 | Team Udayavani |

ವಾಷಿಂಗ್ಟನ್‌ : 2008ರಲ್ಲಿ ನಡೆದಿದ್ದ 26/11 ಮುಂಬಯಿ ಉಗ್ರ ದಾಳಿಗೆ ಹತ್ತು ವರ್ಷ ಸಂದಿವೆಯಾದರೂ ಇನ್ನೂ  ನ್ಯಾಯ ನಿರಾಕರಿಸಲಾಗಿರುವ ಭಾರತಕ್ಕೆ ಅಮೆರಿಕದ ಪೂರ್ಣ ಬೆಂಬಲವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Advertisement

26/11ರ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಅಮಾಯಕರನ್ನು ಹತ್ಯೆ ಗೈದಿದ್ದ  ದಾಳಿಯ ಸೂತ್ರದಾರರು ಪಾಕಿಸ್ಥಾನದಲ್ಲಿ ಇನ್ನೂ ಹಾಯಾಗಿಯೇ ಇದ್ದು ಅವರಿಗೆ ಯಾವುದೇ ರೀತಿಯ ಕಾನೂನು ಶಿಕ್ಷೆ ಈ ತನಕವೂ ಆಗಿಲ್ಲ. ಉಗ್ರರ ಅಂದಿನ ದಾಳಿಯಲ್ಲಿ ಹತರಾದ ಅಮಾಯಕರಿಗೆ ನ್ಯಾಯಾ ದೊರಕಿಸಲು ಭಾರತಕ್ಕೆ ಅಮೆರಿಕದ ಪೂರ್ಣ ಬೆಂಬಲವಿದೆ ಎಂದು ಟ್ರಂಪ್‌ ಹೇಳಿದರು. 

ಮುಂಬಯಿ ಮೇಲಿನ ಉಗ್ರ ದಾಳಿಗೆ ಹತ್ತು ವರ್ಷ ಸಂದಿರುವ ಈ ಸಂದರ್ಭದಲ್ಲಿ ನ್ಯಾಯಕ್ಕಾಗಿ ಇನ್ನೂ ಹೋರಾಡುತ್ತಿರುವ ಭಾರತಕ್ಕೆ ಬೆಂಬಲಕ್ಕೆ ಅಮೆರಿಕ ನಿಂತಿದೆ ಎಂದು ಟ್ರಂಪ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next