ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಮನೆಮಂದಿ ಬಂದು ಹೊಸ ವರ್ಷದ ಸಂಭ್ರಮ – ಸಡಗರವನ್ನು ಹೆಚ್ಚಿಸಿದ್ದಾರೆ.
ಭವ್ಯ, ತ್ರಿವಿಕ್ರಮ್, ರಜತ್ ಅವರ ಕುಟುಂಬ ದೊಡ್ಮನೆಗೆ ಬಂದು ತಮ್ಮವರ ಜತೆ ಆತ್ಮೀಯವಾಗಿ ಕಾಲ ಕಳೆದಿದ್ದಾರೆ. ಸದಾ ವಾದ – ವಾಗ್ವಾದವಾಗುತ್ತಿದ್ದ ಬಿಗ್ ಬಾಸ್ ಮನೆಯಲ್ಲಿ ಸಂತಸದ ಕಣ್ಣೀರು ಹರಿದಿದೆ. ಮನೆ ಬಿಟ್ಟು ದೂರವಾಗಿದ್ದ ಸ್ಪರ್ಧಿಗಳು ತಮ್ಮವರನ್ನು ಅಪ್ಪಿಕೊಂಡು ಆನಂದಬಾಷ್ಪವನ್ನು ಸುರಿಸಿದ್ದಾರೆ.
ಮೋಕ್ಷಿತಾ ಪೈ ಅವರ ಕುಟುಂಬ ಬಿಗ್ ಬಾಸ್ ಮನೆಗೆ ಬಂದಿದೆ. ಮೋಕ್ಷಿತಾ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುವ ಅವರ ತಮ್ಮ ಪುಟಾಣಿಯನ್ನು ನೋಡಿ ಕಣ್ಣೀರು ಹಾಕಿದ್ದಾರೆ.
ವೀರ್ ಚೇರ್ ನಲ್ಲಿರುವ ಮೋಕ್ಷಿತಾ ಅವರ ವಿಶೇಷ ಚೇತನ ತಮ್ಮನ ಜತೆ ಅವರ ಪೋಷಕರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತಮ್ಮನನ್ನು ನೋಡಿದ ಕೂಡಲೇ ಮೋಕ್ಷಿತಾ ತುಂಬಾ ಮಿಸ್ ಮಾಡಿಕೊಂಡೆ ಅಂಥ ಮುದ್ದಾಡುತ್ತಾ ಅತ್ತಿದ್ದಾರೆ.
ಪುಟಾಣಿ.. ನೋಡುತ್ತಾ ಇಲ್ಲ ಅವನು. ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮತ್ತೆ ಜೋರಾಗಿ ತಬ್ಬಿಕೊಂಡು ಅತ್ತಿದ್ದಾರೆ. ಈ ಭಾವುಕ ಕ್ಷಣಕ್ಕೆ ಇಡೀ ಮನೆಯೇ ಮೂಕವಿಸ್ಮಿತವಾಗಿ ಕಣ್ಣೀರು ಹರಿಸಿದೆ.
ಉಗ್ರಂ ಮಂಜು ಅವರ ತಂದೆ ರಾಗಿ ರಾಮಣ್ಣ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತಂದೆ ಬರುತ್ತಿದ್ದಂತೆ ಮಂಜು ಕಣ್ಣಿರಿಟ್ಟಿದ್ದಾರೆ. ಯಾಕೋ ಅಳೋದು, ಅಳಬಾರದು ಲೇ. ತಂದೆ ನಗುತ್ತಾ, ನಗುತ್ತಾ ಇದ್ದೇನೆ. ಏನಕ್ಕೆ ಅಳೋದಿಲ್ಲಿ. ಹಳೆ ಮಂಜು ಬಿಟ್ಟು ಹೊಸ ಮಂಜು ರೀತಿ ಕಾಣ್ತಾ ಇದ್ದೀಯಾ ಎಂದು ಮಂಜು ಅವರ ತಂದೆ ಮಗನ ಹೆಗಲ ಮೇಲೆ ಕೈಹಾಕಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಒಂದು ರೀತಿ ಬಿರುಗಾಳಿ ಇದ್ದಂಗೆ ಎಂದು ಹೇಳುತ್ತಾ ಕಾಲಿಗೆ ಬೀಳಲು ಬಂದ ಚೈತ್ರಾರನ್ನು ಅಲ್ಲೇ ಇರು ಅಲ್ಲೇ ಇರು ಎಂದು ತಮಾಷೆ ಮಾಡಿದ್ದಾರೆ. ಇನ್ನೊಂದು ಕಡೆ ಮಂಜು ಅವರ ತಾಯಿಯ ಧ್ವನಿಯನ್ನು ಕೇಳಿಸಲಾಗಿದೆ. ಇದನ್ನು ಕೇಳಿ ಮಂಜು ತಾಯಿಯನ್ನು ಅತ್ತಿತ್ತ ಹುಡುಕಿದ್ದಾರೆ.