Advertisement

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

09:53 AM Jan 04, 2025 | Team Udayavani |

ನವದೆಹಲಿ: ಇಸ್ರೋ ಈ ವರ್ಷ ಅಮೆರಿಕದ ಬ್ಲೂಬರ್ಡ್‌ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹದ ನೆರವಿನಿಂದ ಬಾಹ್ಯಾಕಾಶದಿಂದ ನೇರ ಸಂಪರ್ಕವನ್ನು ಬಳಸಿಕೊಂಡು ಫೋನ್‌ ಕರೆಗಳನ್ನು ಮಾಡಬಹುದಾಗಿದೆ.

Advertisement

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಅಮೆರಿಕದ ಕಂಪನಿಯೊಂದು ಬೃಹತ್‌ ಪ್ರಮಾಣದ ಸಂವಹನ ಉಪಗ್ರಹವನ್ನು ಭಾರತೀಯ ರಾಕೆಟ್‌ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಅಮೆರಿಕದ ಸಂವಹನ ಉಪಗ್ರಹವನ್ನು ನಾವು ಉಡಾವಣೆ ಮಾಡಲಿದ್ದೇವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಈ ಉಡಾವಣೆಯು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶ ಹೊಂದಿದ್ದು, ನ್ಯೂ ಸ್ಪೇಸ್‌ ಇಡಿಯಾಲಿ. ನೇತೃತ್ವದಲ್ಲಿ ನಡೆಯಲಿದೆ

ಏನಿದು ಉಪಗ್ರಹ?
ಈ ಉಪಗ್ರಹ ಸೇವೆಯನ್ನು ಬಳಸಿಕೊಂಡು, ಹೆಚ್ಚುವರಿ ಉಪಕರಣಗಳನ್ನು ಬಳಸದೇ ಯಾರಾದರೂ ತಮ್ಮ ಸೇವಾ ಪೂರೈಕೆದಾರ ಕಂಪನಿಗಳಿಂದ ಧ್ವನಿ ಕರೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಉಪಗ್ರಹ 64000 ಚ.ಮೀ ವಿಸ್ತಾರದ ಅಂಟೇನಾ ಹೊಂದಿದ್ದು, ಸುಮಾರು 6000 ಕಿಲೋ ಗ್ರಾಮ್‌ ತೂಕವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next