Advertisement
ಜ 26ರ ಬೆಳಗ್ಗೆ 10.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ.
Related Articles
Advertisement
ಜ 27ರಂದು ಸೋಮವಾರ ಬೆಳಗ್ಗೆ 10 ಕ್ಕೆ, ಮಧ್ಯಾಹ್ನ 3ಕ್ಕೆ ಹಾಗೂ ಸಂಜೆ 6 ಕ್ಕೆ ದಿವ್ಯಬಲಿಪೂಜೆನಡೆಯಲಿದೆ. ಆ ದಿನದಂದು ರೋಗಿಗಳಿಗಾಗಿ ವಿಶೇಷ ಪೂಜೆ ಹಾಗೂ ಆ ದಿನ ಮಾತ್ರ ರೋಗಿಗಳ ವಾಹನಗಳನ್ನು ಇಗರ್ಜಿಯ ವಠಾರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಬೇರೆ ದಿನಗಳಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಜ 28ರಂದು ಹಾಗೂ ಜ 29ರಂದು ಪ್ರಥಮ ಪೂಜೆ ಬೆಳಗ್ಗೆ 8 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 10 ಗಂಟೆಗೆ ನೆರವೇರಲಿದೆ.ಜ 30ರಂದು ಪ್ರಥಮ ಪೂಜೆ ಬೆಳಗ್ಗೆ 8 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ.
ಹರಕೆಯ ಮೊಂಬತ್ತಿ ಹಾಗೂ ಧಾರ್ಮಿಕ ವಸ್ತುಗಳು ಪುಣ್ಯಕ್ಷೇತ್ರದ ಸ್ಟಾಲ್ ನಲ್ಲಿ ಸಿಗಲಿದ್ದು, ಹರಕೆಯ ಪೂಜೆಗಳನ್ನು ಸ್ವೀಕರಿಸುವ ವ್ಯವಸ್ಥೆ ಇದೆ. ನವೇನದ ದಿನಗಳಲ್ಲಿ ಹಾಗೂ ಹಬ್ಬದ ದಿನಗಳಲ್ಲಿ ಭಕ್ತಾದಿಗಳಿಗೆ ವಿಶೇಷ ಪಾಪ ನಿವೇದನೆಯ ವ್ಯವಸ್ಥೆ ಇರುವುದು ಎಂದು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ, ಸಂತ ಲಾರೆನ್ಸ್ ಬಸಿಲಿಕಾ ಆಡಳಿತ ಸಮಿತಿಯ ರೆಕ್ಟರ್ ಅ.ವಂ.ಅಲ್ಬನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.