Advertisement

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

08:38 PM Jan 04, 2025 | Team Udayavani |

ನವದೆಹಲಿ: ಹಗಲಿನಲ್ಲಿ ಉತ್ತರ ಪ್ರದೇಶದ ನೋಯ್ಡಾದ ಖಾಸಗಿ ಕಂಪನಿಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ರಾತ್ರಿ ಯುಎಸ್ ಮೂಲದ ಮಾಡೆಲ್ ಆಗಿ ಬದಲಾಗುತ್ತಿದ್ದ. ಹೌದು ಹಗಲಿನ ಕೆಲಸ ಮುಗಿಸಿದ ಬಳಿಕ ರಾತ್ರಿಯ ಚಟುವಟಿಕೆಗಳು ಯುವತಿಯರೊಂದಿಗೆ ಆನ್ಲೈನ್ ನಲ್ಲೆ ನಡೆಯುತ್ತಿದ್ದವು.

Advertisement

ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡೆಲ್ ಆಗಿ ನಟಿಸುವ ಮೂಲಕ 700 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಬ್ಲ್ಯಾಕ್‌ಮೇಲ್ ಮೂಲಕ ಭಾರೀ ಹಣವನ್ನು ಪೀಕಿದ ಆರೋಪದ ಮೇಲೆ 23 ವರ್ಷದ ತುಷಾರ್ ಸಿಂಗ್ ಬಿಶ್ತ್ ಎಂಬಾತನನ್ನು ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ಬಂಧಿಸಲಾಗಿದೆ.

ದೆಹಲಿ ನಿವಾಸಿ ತುಷಾರ್ BBA ಪದವಿ ಪಡೆದಿದ್ದು, ಕಳೆದ ಮೂರು ವರ್ಷಗಳಿಂದ ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ.ಸೈಬರ್ ಕ್ರೈಮ್ ಜಗತ್ತಿಗೆ ಇಳಿದು ಭಾರೀ ಸಂಖ್ಯೆಯ ಮಹಿಳೆಯರನ್ನು ಸಂಪರ್ಕಿಸಿ ಅವರಲ್ಲಿ ದುರಾಸೆ ಮೂಡಿಸಿ ಹಣ ಮಾಡಿದ್ದಾನೆ.

ಆ್ಯಪ್ ಮೂಲಕ ಪಡೆದ ವರ್ಚುವಲ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ತುಷಾರ್ ಜನಪ್ರಿಯ ಡೇಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಬಂಬಲ್ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಕೊಂಡು ಮಹಿಳೆಯರ ಸಂಪರ್ಕ ಸಾಧಿಸಿ ವಂಚಿಸಿದ್ದಾನೆ.

Advertisement

ಬ್ರೆಜಿಲ್ ಮಾಡೆಲ್‌ನ ಫೋಟೋಗಳನ್ನು ಬಳಸಿಕೂಂಡು ಕಟ್ಟು ಕಥೆಗಳೊಂದಿಗೆ ಫ್ಯಾಬ್ರಿಕೇಟೆಡ್ ಬಳಸಿಕೊಂಡು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು18-30 ವರ್ಷ ವಯಸ್ಸಿನ ಯುವತಿಯರ ಸ್ನೇಹ ಬೆಳೆಸಿ ಫೋಟೋಗಳನ್ನು ಪಡೆದು ವಂಚನೆ ಮಾಡಿದ್ದಾನೆ.

ಪೊಲೀಸರ ಪ್ರಕಾರ, ತುಷಾರ್ ಈ ದೃಶ್ಯಗಳನ್ನು ಬಳಸಿಕೊಂಡು ಯುವತಿಯರಿಗೆ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ. ಸಂತ್ರಸ್ತೆ ಹಣ ನೀಡಲು ನಿರಾಕರಿಸಿದರೆ, ಫೋಟೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತುಷಾರ್ ನನ್ನ ಬಂಧಿಸಿರುವ ಪೊಲೀಸರು ಆತನ ಜನ್ಮ ಜಾಲಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next