Advertisement
ಪ್ರತಿ ವಾರದಂತೆ ಈ ವಾರ ಬಿಗ್ ಬಾಸ್ ಮನೆ ಇರಲಿಲ್ಲ. ವಾದ – ವಾಗ್ವಾದ ನಡೆಯುತ್ತಿದ್ದ ದೊಡ್ಮನೆಯಲ್ಲಿ ಶಾಂತಿ – ಸಂಭ್ರಮ ಮನೆ ಮಾಡಿತ್ತು. ಮೂರು ತಿಂಗಳ ಬಳಿಕ ಸ್ಪರ್ಧಿಗಳು ತಮ್ಮ – ತಮ್ಮ ಮನೆಯವರನ್ನು ಭೇಟಿಯಾಗಿ ಅವರೊಂದಿಗೆ ಆಪ್ತ ಕ್ಷಣಗಳನ್ನು ಕಳೆದಿದ್ದಾರೆ.
Related Articles
Advertisement
ಗ್ರೋಸರಿ ಟಾಸ್ಕ್ ಸಮಯದಲ್ಲಿ ಸ್ಪರ್ಧಿಗಳ ನಡುವೆ ಉಂಟಾದ ಗೊಂದಲ ಹಾಗೂ ವಾಗ್ವಾದದ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಹನುಮಂತು ಅವರೇ ಈ ವಿಚಾರದಲ್ಲಿ ಬೆಸ್ಟ್ ಎನ್ನುವ ಮಾತಿನ ಬಗ್ಗೆ ಭವ್ಯ ಅವರು ನನಗಿಂತ ಬೆಸ್ಟ್ ಅವರು (ಹನುಮಂತು) ಇದ್ದಾರೆ ಸರ್ ಎಂದು ಕಿಚ್ಚನ ಮುಂದೆ ಹೇಳಿದ್ದಾರೆ. ಇದಕ್ಕೆ ಕಿಚ್ಚ ಎಲ್ಲದರಲ್ಲೂ ಸಾಮರ್ಥ್ಯ ಇದ್ದವರು ಈ ಕಪ್ ಗೆಲ್ಲಬೇಕು ಭವ್ಯ. ನೀವು ನಿಮ್ಮನ್ನು ಡಿಕ್ಲೇರ್ ಮಾಡಿಬಿಟ್ರಿ ನೀವು ಫಿಟ್ ಆಗಲ್ಲವೆಂದು ಕಿಚ್ಚ ಖಡಕ್ ಆಗಿಯೇ ಭವ್ಯ ಅವರಿಗೆ ಹೇಳಿದ್ದಾರೆ.
ನಾನು ಏನು ಅಂಥ ಪ್ರೂವ್ ಮಾಡಿ ಬಿಟ್ಟಿದ್ದೀನಿ ಅಪರ್ ಹ್ಯಾಂಡ್ ನೀವು ಆಡಿ ಎಂದು ತ್ರಿವಿಕ್ರಮ್ ಹೇಳಿದ ಮಾತನ್ನು ಮಂಜು ಅವರು ಕಿಚ್ಚನ ಮುಂದೆ ಹೇಳಿದ್ದಾರೆ.
ಇದಕ್ಕೆ ಹನುಮಂತು ಅವರು, ಇಷ್ಟು ವಾರ ನಾವು ನಿಮಗೆ ಊಟ ಹಾಕಿದ್ದೀವಿ. ನೀವು ಗೆದ್ದು ಊಟ ಹಾಕ್ರಿ ಅನ್ನುವ ಮಾತನ್ನು ತ್ರಿವಿಕ್ರಮ್ ಅವರು ಹೇಳಿದ್ರು ಎಂದು ಹನುಮಂತು ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಮಧ್ಯ ಬಂದು ಏನಂಥ, ಆ ಸ್ಟೇಟ್ಮೆಂಟ್ ಹೇಳಿಲ್ಲ ನಾನು ನಿಮಗೆ ಎಂದಿದ್ದಾರೆ.