Advertisement

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

01:24 AM Apr 29, 2024 | Team Udayavani |

ಕಾಸ್‌ಗಂಜ್‌ (ಉ.ಪ್ರ.): ಈ ಚುನಾವಣೆ ರಾಮಭಕ್ತರಿಗೆ ಗುಂಡಿಟ್ಟವರು ಮತ್ತು ರಾಮಮಂದಿರ ಕಟ್ಟಿದವರ ನಡುವಿನ ಆಯ್ಕೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಮೂಲಕ ವಿಪಕ್ಷ ನಾಯಕರ ಮೇಲೆ ವಾಗ್ಧಾಳಿ ನಡೆಸಿದ್ದಾರೆ.

Advertisement

ಉತ್ತರ ಪ್ರದೇಶದ ಏತ್‌ ಕಾಸ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್‌ ಸಿಂಗ್‌ ಪರ ಪ್ರಚಾರ ಮಾಡುವ ವೇಳೆ ಅಮಿತ್‌ ಶಾ ಈ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಹಾಗೂ ವಿಪಕ್ಷ ನಾಯಕರು ರಾಮಮಂದಿರ ಉದ್ಘಾಟನೆಗೆ ತಪ್ಪಿಸಿಕೊಂಡಿದ್ದನ್ನು ಉಲ್ಲೇಖೀಸಿದ ಅವರು, ಕರಸೇವಕರ ಮೇಲೆ ಗುಂಡು ಹಾರಿಸಿದ್ದು ನಾವೇ ಎಂಬ ಅರಿವು ಕಾಂಗ್ರೆಸ್‌ ನಾಯಕರಿದೆ. ಹೀಗಾಗಿಯೇ ಅವರು ಉದ್ಘಾಟನೆಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ “ಬಾಬಾ’ ಹಾಗೂ ಅಖೀಲೇಶ್‌ ಯಾದವ್‌ ಅವರು ರಾಮಮಂದಿರ ವಿಷಯವನ್ನು 70 ವರ್ಷಗಳ ಕಾಲ ನನೆಗುದಿಗೆ ಬಿಟ್ಟಿದ್ದರು. ಆದರೆ ನೀವು ಮೋದಿಗೆ 2ನೇ ಅವಧಿಗೆ ಅಧೀಕಾರ ಕೊಟ್ಟ ಕೂಡಲೇ ರಾಮಮಂದಿರ ನಿರ್ಮಾಣವಾಗಿದೆ ಎಂದು ಹೇಳಿದರು.

ಮೀಸಲಾತಿ ರದ್ದು ಇಲ್ಲ: ಎನ್‌ಡಿಎ ಮೈತ್ರಿಕೂಟಕ್ಕೆ 400 ಸ್ಥಾನಗಳು ಬಂದರೆ ಮೀಸಲಾತಿಯನ್ನು ರದ್ದು ಮಾಡಲಾಗುತ್ತದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆದರೆ ಬಿಜೆಪಿ ಸರಕಾರ ಯಾವುದೇ ಮೀಸಲಾತಿಯನ್ನು ರದ್ದು ಮಾಡುವುದಿಲ್ಲ. ಮೋದಿ ಅವರ ಆಡಳಿತದ ಅವಧಿಯಲ್ಲೇ ಅತೀಹೆಚ್ಚು ಜನರಿಗೆ ಸೌಲಭ್ಯಗಳು ದೊರಕಿವೆ ಎಂದು ಅವರು ಹೇಳಿದರು. ಈ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ದೇಶದ ಬಡಜನರಿಗೆ ನೀಡಲಾಗುತ್ತಿರುವ ಉಚಿತ ಪಡಿತರ ವ್ಯವಸ್ಥೆಯನ್ನು 2029ರ ವರೆಗೆ ಮುಂದುವರಿ ಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next