Advertisement
ನಗರದಲ್ಲಿ ಡಿ.25ರ ಬುಧವಾರ ವಿವಿಧ ಸಂಘಟನೆಗಳ ಪ್ರಮುಖರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹಲವು ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜಾತಿಗಳು ಹಾಗೂ ಸಂಪ್ರಾಯಗಳನ್ನು ಒಳಗೊಂಡಿರುವ ಭಾರತದಂತಹ ದೇಶವನ್ನು ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು. ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಎಲ್ಲ ಭಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟವರು. ಆದರೆ, ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನಲ್ಲಿ ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದು, ಕೋಟ್ಯಾಂತರ ಭಾರತೀಯರಿಗೆ ನೋವುಂಟಾಗಿದೆ ಎಂದರು.
Related Articles
Advertisement
ಇನ್ನೋರ್ವ ಮುಖಂಡ ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಅವರಿಗೆ ಜನಸಂಘ ಕಾಲದಿಂದಲೂ ಅಪಮಾನ ಮಾಡುತ್ತಾ ಬರಲಾಗಿದೆ. ಸಾವಿರಾರು ವರ್ಷಗಳ ಹಿಂದಿನ ಸಮಾಜ ವ್ಯವಸ್ಥೆಯನ್ನೇ ಈಗಲೂ ಮುಂದುವರೆಸಬೇಕು ಎಂಬುದೇ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಿಜೆಪಿಯ ಧ್ಯೇಯವಾಗಿದೆ ಎಂದು ಕಿಡಿಕಾರಿದರು.
ಇನ್ನೊಬ್ಬ ಮುಖಮಡ ಎಂ.ಸಿ.ಮುಲ್ಲಾ ಮಾತನಾಡಿ, ಅಂಬೇಡ್ಕರ್ ಕುರಿತಾದ ಅಮಿತ್ ಶಾ ಹೇಳಿಕೆಯು ನಾಚಿಕೆಗೇಡು. ದೇಶದಲ್ಲಿ ಇಷ್ಟೆಲ್ಲ ಪ್ರತಿಭಟನೆಗಳು, ಹೋರಾಟಗಳು ಆಗುತ್ತಿದ್ದರೂ ಅಮಿತ್ ಶಾ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿಲ್ಲ. ತಮ್ಮ ಹಠಮಾರಿತನ ಬಿಟ್ಟು ದೆಹಲಿಯಲ್ಲಿರುವ ಅಂಬೇಡ್ಕರ್ ಅವರ ಬೂಟ್‌ಗಳನ್ನು ಅಮಿತ್ ಶಾ ತಲೆ ಮೇಲೆ ಹೊತ್ತು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟಗಾರರನ್ನು ಗಂಜಿಗಿರಾಕಿಗಳು ಎಂದು ಹೇಳಿಕೆ ಕೊಡುತ್ತಾರೆ. ಆದ್ದರಿಂದ ಡಿ.28ರಂದು ನಡೆಯುವ ಬಂದ್ ಸಂದರ್ಭದಲ್ಲಿ ಯತ್ನಾಳ್ ಹಾಗೂ ಬೆಂಬಲಿಗರ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಗಾ ಇಡಬೇಕು. ಏನಾದರೂ ಅಹಿತಕರ ಘಟನೆ ಉಂಟಾದಲ್ಲಿ ಅದಕ್ಕೆ ಯತ್ನಾಳ್ ತಂಡವೇ ಹೊಣೆಯಾಗಲಿದೆ ಎಂದು ಹೇಳಿದರು. ಮುಖಂಡರಾದ ರವಿಕುಮಾರ್ ಬಿರಾದಾರ್, ಸಂಗಮೇಶ ಸಾಗರ್, ಮಹಾದೇವಿ ಗೋಕಾಕ್ ಮಾತನಾಡಿದರು.