Advertisement

Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ

03:25 PM Dec 18, 2024 | Team Udayavani |

ನವದೆಹಲಿ : ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಬುಧವಾರ(ಡಿ18) ಒತ್ತಾಯಿಸಿದೆ.

Advertisement

ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅಂಬೇಡ್ಕರ್ ಅವರನ್ನು ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತೇವೆ. ಅವರು ರಾಷ್ಟ್ರದ ಕ್ಷಮೆ ಕೇಳಬೇಕು’ ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ನೀರಜ್ ಡಾಂಗಿ, ಟೀಕೆಗಳಿಗೆ ಶಾ ಅವರ ಕ್ಷಮೆಯಾಚನೆಗೆ ತಮ್ಮ ಪಕ್ಷವು ಒತ್ತಾಯಿಸುತ್ತದೆ.ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವುದು ಒಂದು ಫ್ಯಾಷನ್ ಆಗಿದೆ ಎಂದು ಹೇಳಿದರು. ಇದು ದೇಶದ ದಲಿತರಿಗೆ ಮತ್ತು ಬಾಬಾಸಾಹೇಬರಿಗೆ ಮಾಡಿದ ನೇರ ಅವಮಾನ. ಬಿಜೆಪಿ ನಾಯಕರಿಗೆ ಯಾವ ರೀತಿಯ ಚಿಂತನೆ ಇದೆ ಎಂದು ಶಾ ಇಡೀ ದೇಶಕ್ಕೆ ತೋರಿಸಿದ್ದಾರೆ. ಅವರು ಅವಮಾನಿಸಿದ ವಂಚಿತ ಮತ್ತು ಶೋಷಿತ ವರ್ಗ, ಅದೇ ವರ್ಗವು ಅವರನ್ನು 240 ರಿಂದ 40 ಕ್ಕೆ ಇಳಿಸುತ್ತದೆ” ಎಂದರು.

“ಅಮಿತ್ ಶಾ ಸಾರ್ವಜನಿಕವಾಗಿ ಮತ್ತು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಒತ್ತಾಯಿಸುತ್ತೇನೆ. ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಅವರು ಹೇಳಿರುವುದನ್ನು ಗಮನಿಸಿದರೆ ಅವರು ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಡಾಂಗಿ ಹೇಳಿದರು.

”ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ನಾಮ ಹೇಳಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು” ಎಂದು ಶಾ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದರು.

Advertisement

ಸಿದ್ದರಾಮಯ್ಯ ಕಿಡಿ
ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅಂಬೇಡ್ಕರ್ ಅವರು “ಫ್ಯಾಶನ್” ಅಲ್ಲ, “ಶಾಶ್ವತ ಸ್ಫೂರ್ತಿ” ಎಂದು ಸಿಎಂ ಸಿದ್ದರಾಮಯ್ಯ ಹೇಳಿ ಅಮಿತ್ ಶಾ ವಿರುದ್ಧ ಕಿಡಿ ಕಾರಿದರು.

ಶಾ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಸಿಎಂ, “ಮೊದಲು, ಡಾ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಬಿಜೆಪಿಯ ನೈಜ ಅಭಿಪ್ರಾಯವನ್ನು ಬಹಿರಂಗವಾಗಿ ಬಹಿರಂಗಪಡಿಸುವ ಮೂಲಕ ಅಂತಿಮವಾಗಿ ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದಿದ್ದಾರೆ.

”ಸಂಸತ್ತಿನಲ್ಲಿ ನಿಮ್ಮ ಹೇಳಿಕೆ ನಮಗೆ ಆಶ್ಚರ್ಯ ತಂದಿಲ್ಲ. ನಿಮ್ಮ ಪಕ್ಷದ ನಿಜವಾದ ಮನಸ್ಥಿತಿ ನಮಗೆ ಮೊದಲೇ ತಿಳಿದಿತ್ತು. ಆದರೆ ಈಗ, ಭಾರತೀಯ ಸಂವಿಧಾನ ಶಿಲ್ಪಿಯ ಬಗ್ಗೆ ನಿಮ್ಮ ಗೌರವದ ಕೊರತೆಯನ್ನು ಇಡೀ ದೇಶವೇ ನೋಡಿದೆ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಡೆಯುವ ಸಂಸತ್ತಿನಲ್ಲೇ ನಿಂತು ಅವರ ವಿರುದ್ಧ ಮಾತನಾಡಿರುವುದು ದುರಹಂಕಾರವನ್ನು ತೋರಿಸುತ್ತದೆ” ಎಂದಿದ್ದಾರೆ.

“ಅಭಿನಂದನೆಗಳು, ಶಾ, ಈ ನಾಚಿಕೆಯಿಲ್ಲದ ಕೃತ್ಯಕ್ಕೆ” ನನಗೆ ಬಾಬಾಸಾಹೇಬರ ಮೇಲೆ ಅಪಾರ ಗೌರವವಿದೆ ಮತ್ತು ನನ್ನ ಮಾತುಗಳನ್ನು ತಿರುಚಲಾಗಿದೆ ಎಂದು ಹೇಳುವ ಮೂಲಕ ರಾಷ್ಟ್ರವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ. ನಾವು ಮೋಸಗಾರರಲ್ಲ. ನಿಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳಿ ಮತ್ತು ರಾಷ್ಟ್ರವನ್ನು ಎದುರಿಸಿ” ಎಂದು ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

“ನಿಮ್ಮದೇ ದಾಟಿಯಲ್ಲಿ ನಾನು ಪ್ರತಿಕ್ರಿಯಿಸುತ್ತೇನೆ. ನಿಮ್ಮ ಪಕ್ಷ ಮತ್ತು ಅದರ ಸೈದ್ಧಾಂತಿಕ ಕುಟುಂಬ ಮೋದಿ … ಮೋದಿ … ಮೋದಿ ಎಂದು ಜಪಿಸುವ ಫ್ಯಾಷನ್ ಅನ್ನು ಅಭಿವೃದ್ಧಿಪಡಿಸಿದೆ . ನೀವು ಮೋದಿಯ ಹೆಸರನ್ನು ಎಷ್ಟು ಬಾರಿ ಜಪಿಸುತ್ತೀರೋ ಅಷ್ಟು ಬಾರಿ ನೀವು ದೇವರ ಹೆಸರನ್ನು ಹೇಳಿದ್ದರೆ , ನೀವು ಸ್ವರ್ಗದಲ್ಲಿ ಏಳು ಜನ್ಮಕ್ಕಲ್ಲ, ನೂರು ಜನ್ಮಕ್ಕೆ ಸ್ಥಾನವನ್ನು ಪಡೆದುಕೊಳ್ಳಬಹುದು” ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next