Advertisement

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

01:02 AM Dec 18, 2024 | Team Udayavani |

ಹೊಸದಿಲ್ಲಿ: “ಗಾಂಧಿ ಕುಟುಂಬವು ಸಂವಿಧಾನವನ್ನು ತನ್ನ ಕುಟುಂಬಕ್ಕೆ ಸೇರಿದ ಆಸ್ತಿ ಎಂಬಂತೆ ಭಾವಿಸಿ, ಕಳೆದ 75 ವರ್ಷಗಳಿಂದಲೂ ಸಂಸತ್ತಿಗೆ ವಂಚಿಸುತ್ತಲೇ ಬಂದಿದೆ. ಕಾಂಗ್ರೆಸ್‌ ಕೂಡ ನೆಹರೂ-ಗಾಂಧಿ ಕುಟುಂಬವನ್ನು ಹೊಗಳುವುದುನ್ನು ಬಿಟ್ಟು ಮತ್ಯಾವ ಘನಕಾರ್ಯವನ್ನೂ ಮಾಡಿಲ್ಲ.’ ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಟಿ ಬೀಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ 2 ದಿನ ಗಳ ಕಾಲ ನಡೆದ ಸಂವಿಧಾನದ ಕುರಿತ ಚರ್ಚೆಗೆ ಮಂಗಳವಾರ ಉತ್ತರಿಸಿದ ಅಮಿತ್‌ ಶಾ, ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿ, ಚುನಾವಣೆ ಸೋಲುವ ಭಯದಿಂದಾಗಿ 42ನೇ ತಿದ್ದುಪಡಿ ತಂದು ಲೋಕಸಭೆ, ವಿಧಾನಸಭೆಗಳ ಅವಧಿಯನ್ನು ಕಾಂಗ್ರೆಸ್‌ ವಿಸ್ತರಿಸಿತು. 55 ವರ್ಷದಲ್ಲಿ 77 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು ಜನರ ಹಿತಾಸಕ್ತಿಗಾಗಿ ಅಲ್ಲ, ಅದರ ಸ್ವಾರ್ಥಕ್ಕಾಗಿ ಎಂದಿದ್ದಾರೆ. ನಾವು 16 ವರ್ಷದಲ್ಲಿ 22 ತಿದ್ದುಪಡಿ ತಂದಿದ್ದೇವೆ. ಅದೆಲ್ಲವೂ ಬಡವರ್ಗವನ್ನು ಮೇಲೆತ್ತಲು, 370ನೇ ವಿಧಿ ರದ್ದುಗೊಳಿಸಲು, ಜಿಎಸ್‌ಟಿ ಪರಿಚಯದಂಥ ಅಭಿವೃದ್ಧಿ ಕೆಲಸಗಳಿಗಾಗಿ ಎಂದಿದ್ದಾರೆ.

ಜತೆಗೆ ಇವಿಎಂಗಳ ಬಗ್ಗೆ ಕಾಂಗ್ರೆಸ್‌ ಚಕಾರ ಎತ್ತುವುದನ್ನೇ ಗುರಿಯಾಗಿಸಿ ನಿಮಗೆ ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂನಲ್ಲಿ ದೋಷ ಕಾಣಿಸು ವುದೇ? ದೋಷ ಸಾಬೀತುಪಡಿಸಿ ಎಂದು ಚು. ಆಯೋಗ ಹೇಳಿದರೆ ಮಾತ್ರ ಯಾರೂ ಮುಂದೆ ಬರಲಾರಿರಿ ಎಂದೂ ಲೇವಡಿ ಮಾಡಿದ್ದಾರೆ. ಓಲೈಕೆ, ವಂಶಾಡಳಿತ, ಭ್ರಷ್ಟಾಚಾರ ಬಿಟ್ಟುಬಿಟ್ಟರೆ ಜನ ಮತ್ತೆ ನಿಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಕಾಂಗ್ರೆಸ್‌ಗೆ ಕಿವಿ ಮಾತನ್ನೂ ಹೇಳಿದ್ದಾರೆ.

ಮುಸ್ಲಿಂ ಓಲೈಕೆಗೆ ಮೀಸಲು ಹೆಚ್ಚಳ: ಕಾಂಗ್ರೆಸ್‌ ಹಿಂದುಳಿದ ವರ್ಗಕ್ಕಾಗಿ ಎಂದಿಗೂ ಶ್ರಮಿಸಿಲ್ಲ. ಅದು ಮೀಸಲಾತಿ ವಿರೋಧಿ ಪಕ್ಷ, ಮೀಸಲು ಮಿತಿ ಹೆಚ್ಚಿಸಿ ಅದನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್‌ ತಂತ್ರ ರೂಪಿಸಿದೆ. ಮುಸ್ಲಿಂ ಪ್ರತ್ಯೇಕ ಕಾನೂನು ಜಾರಿ ಮೂಲ ಕವೇ ದೇಶದಲ್ಲಿ ಮೊದಲ ಬಾರಿಗೆ ಓಲೈಕೆ ರಾಜಕೀಯ ಆರಂಭವಾಯಿತು. ಮುಸ್ಲಿಂ ಕಾನೂನು ಸಂವಿಧಾನ ಕ್ಕಿಂತ ಮಿಗಿಲಾದುದೇ ಎಂದೂ ಸಚಿವ ಪ್ರಶ್ನಿಸಿದ್ದಾರೆ. ಜತೆಗೆ ಇಡೀ ದೇಶದಲ್ಲಿ ಬಿಜೆಪಿಯ ಕೇವಲ ಒಬ್ಬ ಸಂಸದ ಇದ್ದರೂ ಧರ್ಮದ ಆಧಾರದಲ್ಲಿ ಮೀಸಲು ನೀಡಲು ಬಿಡಲ್ಲ ಎಂದೂ ಶಾ ಹೇಳಿದ್ದಾರೆ.

ವಯಸ್ಸು 54 ಆದರೂ ಆತ “ಯುವಕ’ನಂತೆ!: ಲೇವಡಿ
ವಯಸ್ಸು 54 ಆದರೂ ತನ್ನನ್ನು ತಾನು ಯುವಕ ಎಂದು ಹೇಳಿಕೊಳ್ಳುವ ಆ ನಾಯಕ ಸಂವಿಧಾ ನದ ಪ್ರತಿ ಹಿಡಿದು ತಿರುಗುತ್ತಾ ನಾವು ಸಂವಿ ಧಾನ ಬದಲಿಸುತ್ತಿದ್ದೇವೆ ಎಂದೂ ಊಳಿಡುತ್ತಿ ದ್ದಾರೆ. ಅವರ ಕೈನಲ್ಲಿರುವುದು ಅಸಲಿಗೆ ಸಂವಿ ಧಾನದ ಪ್ರತಿ ಅಲ್ಲ, ಖಾಲಿ ಹಾಳೆ! ಜತೆಗೆ ಹಳ್ಳಿ ಗಳು, ಗಲ್ಲಿಗಳಲ್ಲಿ ಪ್ರೀತಿಯ ಅಂಗಡಿ ತೆರೆಯುವ ಮಾತುಗಳನ್ನೂ ಕೇಳಿದ್ದೇವೆ. ಮಾರಾಟ ಮಾಡಲು ಪ್ರೀತಿ ಸರಕಲ್ಲ, ಅದು ಭಾವನೆ. ಹೀಗೆಂದು ವಿಪಕ್ಷ ನಾಯಕ ರಾಹುಲ್‌ ಬಗ್ಗೆ ಸಚಿವ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

Advertisement

ನಾವು ಒಂದು ಹನಿ ರಕ್ತವನ್ನೂ ಬೀಳಿಸದೇ ದೇಶ ದಲ್ಲಿ ಹಲವು ಬದಲಾವಣೆಗೆ ನಾಂದಿ  ಹಾಡಿದ್ದೇವೆ. ದೇಶದ ಜನರು ಹಲವು ಸರ್ವಾಧಿಕಾರಿಗಳ ಅಹಂಕಾರವನ್ನು ಪ್ರಜಾಸತ್ತಾತ್ಮಕವಾಗಿಯೇ ಮುರಿದಿದ್ದಾರೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next