Advertisement

UV Fusion: ಅರಣ್ಯ, ವನ್ಯಜೀವಿ ಸಂಪತ್ತಿನ ಉಳಿವು ನಮ್ಮೆಲ್ಲರ ಹೊಣೆ

03:52 PM Aug 28, 2024 | Team Udayavani |

ನಾವೆಲ್ಲ ಪತ್ರಿಕೆಗಳಲ್ಲಿ ಇಲೆಕ್ಟ್ರಾನಿಕ್‌ ಮಿಡಿಯಾಗಳಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕೇಳುವ ಒಂದೇ ಸುದ್ದಿ ಅದುವೇ ಊರಿಗೆ ಆನೆ ದಾಳಿ, ಚಿರತೆ ದಾಳಿ, ಹುಲಿ ದಾಳಿ, ಎನ್ನುವ ಸುದ್ದಿಗಳು. ಇವೆಲ್ಲ ನಮಗೆ ದೊಡ್ಡ ಆಘಾತಕಾರಿ ಸುದ್ದಿ ಅಂತ ಅನ್ನಿಸಿ ಅದನ್ನ ದೊಡ್ಡದಾಗಿ ಬಿಂಬಿಸಿ ಹೈಲೇಟ್‌ ಮಾಡುತ್ತೇವೆ. ಆದರೆ ಶತ ಶತಮಾನಗಳಿಂದ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ಮೇಲೆ ನಡೆಯುತ್ತಿರುವ ಮಾನವನ ಕ್ರೌರ್ಯದ ಕೆಲಸಕ್ಕೆ ಮಿತಿ ಎಂಬುದಿಲ್ಲ.

Advertisement

ಮೊದಲು ಹೊಟ್ಟೆಪಾಡುಗಳಿಗೆ ಸಾಮಾನ್ಯರು ಜೀವನವನ್ನು ಕಟ್ಟಿಕೊಳ್ಳಲು ಮಾನವ ಕಾಡುಗಳನ್ನು ಕಡಿದು ತನ್ನ ವಿಸ್ತರಣೆ ನೀತಿಯನ್ನು ಅನುಸರಿಸುತ್ತ ಸಾಗುತ್ತಿದ್ದ, ಇಂದು ಮೊದಲಿನ ಸಾಮನ್ಯ ಜೀವನ ಶೈಲಿಯು ಮರೆತು ಹೋಗಿ ಅಸಾಮಾನ್ಯ ಜೀವನ ಶೈಲಿ,ಅತಿಯಾದ ಅಭಿವೃದ್ಧಿ ತುಡಿತ, ಕೈಗಾರೀಕರಣ, ಆಧುನೀಕರಣ, ಜನಸಂಖ್ಯೆ ಸ್ಫೋಟ, ರಿಯಲ್‌ ಎಸ್ಟೇಟ್‌ ನಂತಹ ಉದ್ಯಮ, ರೆಸಾರ್ಟ್‌ ಸಂಸ್ಕೃತಿಗಳಂತಹ ಅನುಪಯುಕ್ತ ಕೆಲಸಗಳು ಹೀಗೆ ಹತ್ತಾರು ಪ್ರಮುಖ ಕಾರಣಗಳಿಂದಾಗಿ ಕಾಡು ನಾಶವಾಗತೊಡಗಿ ಅರಣ್ಯದಲ್ಲಿ ನಿರ್ಭಿತಿಯಿಂದ ಇರಬೇಕಿದ್ದ  ವನ್ಯಜೀವಿಗಳು ನರಕ ಯಾತನೆ ಅನುಭವಿಸಿ ನಾಡಿನತ್ತ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದೆಲ್ಲವನ್ನು ಹತೋಟಿಯಲ್ಲಿ ಇಡಬೇಕಿದ್ದ ಅರಣ್ಯ ಸಂರಕ್ಷಣಾ ಕಾಯ್ದೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿವೆ ಇನ್ನೂ ಅರಣ್ಯ ಇಲಾಖೆಗಳು ಅಲ್ಲಿರುವ ಅಧಿಕಾರಿಗಳು ಅದೆಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವರೊ ದೇವರೆ ಬಲ್ಲ.

ಈಗಾಗಲೇ ಅನೇಕ ಡೈನೊಸಾರ್‌ ಗಳಂತಹ ಅನೇಕ ಸಂಕುಲಗಳು ನಾಶವಾಗಿವೆ ಮತ್ತು ಅನೇಕ ವನ್ಯಜೀವಿಗಳ ಸಂಕುಲ ಅವನತಿಯ ಹಂತದಲ್ಲಿವೆ. ಇನ್ನೂ ವರ್ಷದಿಂದ ವರ್ಷಕ್ಕೆ ಅರಣ್ಯ ಸಂಪತ್ತಿನ ಪ್ರಮಾಣ ಕುಸಿಯುತ್ತ ಹೋರಟಿದೆ ಅಂದಮೇಲೆ ವನ್ಯಜೀವಿಗಳ ಪಾಡು ಏನು?

ಬರುವ ದಿನಗಳಲ್ಲಿ ಹೀಗೆ ಮುಂದುವರಿದರೆ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುವ ಪ್ರಕರಣಗಳು ಘನನೀಯವಾಗಿ ಏರುತ್ತಾ ಹೋಗಿ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ!? ಇನ್ನಾದರು ನಮ್ಮನ್ನಾಳುವ ಸರಕಾರಗಳು ಎದುರಾಗಿರುವ ಸಮಸ್ಯೆಗಳ ಮೂಲವನ್ನ ಹುಡುಕಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನ ಉಳಿಸಿ ಮುಂಬರುವ ಪೀಳಿಗೆಗೆ ಅರಣ್ಯ ವನ್ಯಜೀವಿ ಸಂಪತ್ತು ಉಳಿಯುವಂತೆ ಮಾಡಬೇಕಿದೆ.

-ಮಲ್ಲಿಕಾರ್ಜುನ

Advertisement

ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next