Advertisement
ಇಂದು ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದು ಇದರಿಂದ ಗೃಹ ಬಳಕೆ ತ್ಯಾಜ್ಯಗಳ ಪ್ರಮಾಣವು ಹೆಚ್ಚಾಗುತ್ತಿದ್ದು ವಿಲೇವಾರಿ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ.
Related Articles
Advertisement
ತ್ಯಾಜ್ಯಗಳ ಸರಿಯಾದ ವಿಲೇವಾರಿ ಮಾಡದ ಕಾರಣ ಕೇವಲ ಅಲ್ಲಿಯ ಪ್ರದೇಶ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪ್ರದೇಶವು ಇದರ ದುರ್ವಾಸನೆಯಿಂದ ಬದುಕಲು ಯೋಗ್ಯವಾಗಿಲ್ಲವಾಗಿದೆ. ಇದೇ ಮಾತ್ರವಲ್ಲದೆ ಪ್ಲಾಸ್ಟಿಕ್‌ನಂತಹ ಕರಗಿ ಹೋಗದ ಕಸಗಳಲ್ಲಿ ನಿಂತ ನೀರಿನಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿ-ಕೀಟಾಣುಗಳು ಉತ್ಪತ್ತಿಯಾಗುತ್ತಿವೆ.
ಈ ಸಮಸ್ಯೆಗಳ್ಳನ್ನು ಜನರೆಲ್ಲ ಒಟ್ಟಾದರೆ ಸುಧಾರಣೆ ಮಾಡಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಹಾಕಲು ದೊಡ್ಡ ಕಸದ ಬುಟ್ಟಿಗಳನ್ನು ಅಳವಡಿಸಬೇಕು. ಪ್ರಮುಖ ಪ್ರದೇಶಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು. ಜನ ಹಸಿ ಹಾಗೂ ಒಣಕಸ ಮನೆಯಲ್ಲಿಯೇ ವಿಂಗಡಿಸುವಂತೆ ಸೂಚಿಸಬೇಕು.
ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಟ್ಟಣದ ಸ್ವತ್ಛತೆಯನ್ನು ಕಾಪಾಡಲು ತಿಂಗಳಿಗೊಮ್ಮೆ ಊರಿನಲ್ಲಿ ಸ್ವಚ್ಚತ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಜನರನ್ನು ಸ್ವಚ್ಚ ಪರಿಸರದೆಡೆಗೆ ಪ್ರೋತ್ಸಾಹಿಸಬೇಕು. ಮಲೇರಿಯಾ, ಚಿಕನ್ ಗುನ್ಯಾದಂತದ ಸಾಂಕ್ರಾಮಿಕ ರೋಗಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಣ್ಣ ವಿಷಯಗಳನ್ನು ನಿರ್ಲಕ್ಷಿಸದೆ ಗ್ರಾಮಸ್ಥರು ಒಂದು ಗೂಡಿ ಕೆಲಸ ಮಾಡಬೇಕು.
ಇದಲ್ಲದೇ ಜನರನ್ನು ಎಚ್ಚರಿಸುವ ಹಾಗೂ ಸಮರ್ಪಕ ಕಸದ ವಿಲೇವಾರಿ ಮಾಡುವ ಕೆಲಸವನ್ನು ಸ್ಥಳೀಯ ಆಡಳಿತ ತ್ವರಿತಗತಿಯಲ್ಲಿ ಮಾಡಬೇಕು. ನಗರ ಪ್ರದೇಶಗಳಲ್ಲಿ ಕಸದ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ಮನೆ ಮನೆಗೆ ಒಣಕಸ ಮತ್ತು ಹಸಿಕಸ ವಿಂಗಡಿಸುವ ಬುಟ್ಟಿ ನೀಡಿ ಜನರನ್ನು ಪ್ರೋತ್ಸಾಹಿಸಬೇಕು.ಈ ಹಲವು ಕಾರ್ಯಗಳ ಮೂಲಕ ಜನರಲ್ಲಿ ಕಸದ ಸೂಕ್ತ ವಿಲೇವಾರಿಯ ಮಹತ್ವವನ್ನು ತಿಳಿಸುವುದು. ಮುಂಬರುವ ಪೀಳಿಗೆಗಳಿಗಾಗಿ ಸ್ವಚ್ಚಂದವಾದ ಪರಿಸರ ನಿರ್ಮಾಣಕ್ಕೆ ಜನರನ್ನು ಸಜ್ಜುಗೊಳಿಸುವುದು. ಆಗ ಮಾತ್ರ ನಾವೆಲ್ಲ ಒಳ್ಳೆಯ, ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ.
-ವಾಣಿ ದಾಸ್
ಎಂ.ಎಂ., ಮಹಾವಿದ್ಯಾಲಯ ಶಿರಸಿ