Advertisement

ಸಮಸ್ಯೆ ಮುಟ್ಟಿಸಲು ಮಾಧ್ಯಮ ಸಹಕಾರಿ

01:31 PM Jun 07, 2017 | Team Udayavani |

ಬೆಂಗಳೂರು: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜತೆ ಪತ್ರಿಕಾ ರಂಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಜನರ ಸಮಸ್ಯೆಯನ್ನು  ಸರ್ಕಾರದ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಗಾಂಧಿ ಭವನದ ಮಹೇಂದ್ರ ದೇಸಾಯಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಎಲ್ಲಾ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸಲು ಮಾಧ್ಯಮಗಳು ಮುಂದಾಗಬೇಕು. ಅತ್ಯಂತ ಪ್ರಭಾವಶಾಲಿಯಾಗಿರುವ ಮಾಧ್ಯಮಗಳು ಸರ್ಕಾರವನ್ನು ಬದಲಿಸಿರುವ ನಿದರ್ಶನಗಳು ಇವೆ ಎಂದು ಹೇಳಿದರು. ಮಾಧ್ಯಮಗಳು ವೈಚಾರಿಕತೆಯನ್ನು ಮೂಡಿಸಬೇಕೇ ಹೊರತು ಮೂಢನಂಬಿಕೆಯನ್ನಲ್ಲ. ಸ್ವತಂತ್ರವಾಗಿದ್ದು, ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು. ಕಾಸರಗೋಡಿನ ಕಾರ್ಯಕ್ರಮವೊಂದರಲ್ಲಿ ನನ್ನ ಬಟ್ಟೆಯ ಮೇಲೆ ಹಕ್ಕಿ ಹಿಕ್ಕೆ ಹಾಕಿತ್ತು.

ಈ ಅಂಶವನ್ನೇ ಪ್ರಮುಖವಾಗಿಸಿಕೊಂಡ ಮಾಧ್ಯಮಗಳು ಅಧಿಕಾರ ಕಳೆದು ಕೊಳ್ಳುವ ಚರ್ಚೆ ನಡೆಸಿದ್ದವು ಹಾಗೆಯೇ ದಸರ ಕಾರ್ಯಕ್ರಮವೊಂದರಲ್ಲಿ ಸೂಟು-ಬೂಟು ಧರಿಸಿದ್ದೆ ಎಂದು ದೊಡ್ಡ ಸುದ್ದಿ ಮಾಡಿದ್ದರು. ಇಂತಹ ಬೆಳವಣಿಗೆ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ ಎಂದು ಹೇಳಿದರು. ಜಾತಿ ವ್ಯವಸ್ಥೆಯಿಂದ ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಶಿಕ್ಷಣ ಸಾಧ್ಯವಾಗಿರಲಿಲ್ಲ.

ಸಂವಿಧಾನದ ಆಶಯದಂತೆ ಸಮಾಜದ ಎಲ್ಲಾ ವರ್ಗದವರಿಗೂ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ಸಿಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿದವರ ಸಂಖ್ಯೆ ಅತ್ಯಂತ ಕಡಿಮೆಯಿದೆ. ಇದು ಸಮಾಜದಲ್ಲಿ ಇಂದಿಗೂ ಅಸಮತೋಲನ ಇದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದರು.

ಜಿಲ್ಲಾ ವರದಿಗಾರರಿಗೆ ಮೀಡಿಯಾ ಕಿಟ್‌  ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಹೆಚ್ಚು ಪ್ರಮಾಣದಲ್ಲಿ ಜಾಹೀರಾತು ನೀಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮೀಡಿಯಾ ಕಿಟ್‌(ಲ್ಯಾಪ್‌ಟಾಪ್‌ ಹಾಗೂ ಕ್ಯಾಮರ) ವಿತರಣೆಗೆ ಚಿಂತನೆ ನಡೆಸುತ್ತಿದ್ದೇವೆ ಎಂದು  ತಿಳಿಸಿದರು.

Advertisement

ಸಚಿವರಾದ ಎಚ್‌.ಆಂಜನೇಯ, ಪ್ರಮೋದ್‌ಮಧ್ವರಾಜ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಬೆಂಗಳೂರು ವಿವಿ ಕುಲಸಚಿವ ಬಿ.ಕೆ.ರವಿ, ಹಿರಿಯ ಪತ್ರಕರ್ತ ಜಿ.ಕೆ.ಸತ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next