Advertisement
ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾರ್ಯಾಚರಿಸಿ ರಕ್ತ ಚರಿತ್ರೆ ಬರೆಯುತ್ತಿದ್ದ 6 ಮಂದಿ ನಕ್ಸಲರಾದ ಚಿಕ್ಕಮಗಳೂರು ಜಿಲ್ಲೆಯ ಲತಾ ಮುಂಡಗಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ಚಿಕ್ಕಮಗಳೂರಿನ ವನಜಾಕ್ಷಿ ಬಾಳೆಹೊಳೆ, ರಾಯಚೂರಿನ ಮಾರೆಪ್ಪ ಅರೋಲಿ, ಕೇರಳ ವಯನಾಡಿನ ಜಿಶಾ, ತಮಿಳುನಾಡು ವೆಲ್ಲೂರಿನ ಕೆ. ವಸಂತ್ ಬುಧವಾರ ಬೆಳಗ್ಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಶರಣಾಗುವುದಾಗಿ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದರು.
Related Articles
ಮುಖ್ಯವಾಹಿನಿಗೆ ಬಂದಿರುವ ನಕ್ಸಲರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಸಮಸ್ಯೆ, ಬೇಡಿಕೆಗಳನ್ನು ಆಲಿಸಿದರು. ಶರಣಾದ ನಕ್ಸಲರಿಗೆ ಸಿದ್ದರಾಮಯ್ಯ ಸಂವಿಧಾನದ ಪುಸ್ತಕ ಹಾಗೂ ಕೆಂಪು ಗುಲಾಬಿ ನೀಡಿದರು. ಹಸ್ತಲಾಘವ ಮಾಡಿ ಮಾತನಾಡಿಸಿದರು. ಉತ್ತಮ ನಾಗರಿಕರಾಗಿ ಬದುಕುವಂತೆ ಸಲಹೆ ನೀಡಿದರು. ಶರಣಾಗತರ ಪರವಾಗಿ ಮುಖ್ಯಮಂತ್ರಿಗೆ ಲತಾ ಮುಂಡಗಾರು ಮನವಿ ಸಲ್ಲಿಸಿದರು.
Advertisement
ಶರಣಾದವರು ಯಾರು?1. ಲತಾ ಮುಂಡಗಾರು, ಚಿಕ್ಕಮಗಳೂರು ಜಿಲ್ಲೆ
2. ಸುಂದರಿ ಕುತ್ಲೂರು, ದಕ್ಷಿಣ ಕನ್ನಡ ಜಿಲ್ಲೆ
3. ವನಜಾಕ್ಷಿ ಬಾಳೆಹೊಳೆ, ಚಿಕ್ಕಮಗಳೂರು
4. ಮಾರೆಪ್ಪ ಅರೋಲಿ, ರಾಯಚೂರು
5. ಜಿಶಾ, ಕೇರಳದ ವಯನಾಡು
6. ಕೆ. ವಸಂತ್, ತಮಿಳುನಾಡಿನ ವೆಲ್ಲೂರು ಮತ್ತೆ ಡಿಸಿ ಮುಂದೆ ಹಾಜರು ?
ಬೆಂಗಳೂರಿನಿಂದ ನಕ್ಸಲರನ್ನು ಮತ್ತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗುರುವಾರ ಅಲ್ಲಿ ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಮುಖ್ಯವಾಹಿನಿಗೆ ಬಂದಿರುವುದಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು ಬಹಳ ಗೌರವಯುತವಾಗಿ ನಡೆದುಕೊಂಡಿದ್ದಾರೆ. ನಾವೂ ಸಹ ಮುಖ್ಯಮಂತ್ರಿಗಳ ನಡೆಗೆ ಧನ್ಯವಾದ ಹೇಳುತ್ತೇವೆ. ನಾವು ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದೇವೆ. ನಕ್ಸಲಿಸಮ್ನಿಂದ ಪರಿವರ್ತನೆ ಆಗಿ ಬಂದಿದ್ದೇವೆ ಎಂದು ಹೇಳಲು ಇಷ್ಟ ಪಡುತ್ತೇವೆ. ನಾವು ಕಾನೂನುಬದ್ಧವಾಗಿ ಹಾಗೂ ಸಂವಿಧಾನಾತ್ಮಕವಾಗಿ ಇಲ್ಲಿ ಜನರ ಪರವಾಗಿ ನಡೆಯುತ್ತಿದ್ದ ಹೋರಾಟಗಳಂತೆ ನಡೆದುಕೊಳ್ಳುತ್ತೇವೆ.
– ಲತಾ ಮುಂಡಗಾರು, ಶರಣಾದ ನಕ್ಸಲ್