ಗದಗ: ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳಷ್ಟೇ ಪ್ರಮುಖವಾಗಿ ಸ್ಮಶಾನ ಭೂಮಿಯೂ ಅವಶ್ಯ. ಗದಗ ಜಿಲ್ಲೆಯ 7 ತಾಲೂಕುಗಳ 331 ಗ್ರಾಮಗಳಲ್ಲಿ ರುದ್ರಭೂಮಿಗಳಿವೆ. ಆದರೆ ಭೂಮಿ ಖರೀದಿ ಹಾಗೂ ಸ್ಮಶಾನಕ್ಕೆ ತೆರಳಬೇಕಾದ ರಸ್ತೆಯಲ್ಲಿನ ಅಡೆತಡೆಗಳ ಸಮಸ್ಯೆಯಿಂದ ಸಾರ್ವಜನಿಕರ ಪರದಾಟ ಮಾತ್ರ ಮುಂದುವರಿದಿದೆ.
Advertisement
ಗದಗ ಜಿಲ್ಲೆಯ 331 ಗ್ರಾಮಗಳ ಪೈಕಿ 213 ರುದ್ರಭೂಮಿಗಳು ಮೊದಲಿನಿಂದಲೂ ಇದ್ದು, 89 ರುದ್ರಭೂಮಿಗಳು ಸರಕಾರಿ, 29 ಖಾಸಗಿ ಜಮೀನುಗಳನ್ನು ಖರೀದಿ ಮಾಡಲಾಗಿದೆ. ಕೆಲವೆಡೆ ಜಿಲ್ಲಾಡಳಿತ ಸ್ಮಶಾನ ಭೂಮಿ ಖರೀದಿ ಪ್ರಕ್ರಿಯೆ ನಡೆಸಿದ್ದರೂ, ಕೆಲ ತಾಂತ್ರಿಕ ಸಮಸ್ಯೆಗಳಿಂದ ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ರುದ್ರಭೂಮಿಗಳ ಖರೀದಿ ಬಾಕಿ ಉಳಿದಿದೆ.
Related Articles
Advertisement
ನರಗುಂದ ತಾಲೂಕಿನಲ್ಲಿ ಕಲ್ಲಾಪುರ, ಜಗಾಪುರ, ಖಾನಾಪುರ, ಮೂಗನೂರು, ಕಲಕೇರಿ, ಸಿದ್ದಾಪುರ, ಬೆನಕೊಪ್ಪ, ಅರಸಿನಗೋಡೆ, ಕುರುಗೋವಿನಕೊಪ್ಪ, ಲಕಮಾಪುರ, ಬೆಳ್ಳೇರಿ, ವಾಸನ, ಬೂದಿಹಾಳ ಮತ್ತು ಗಂಗಾಪುರ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು, ಮುಂಡರಗಿ ತಾಲೂಕಿನ ಬಸಾಪುರ, ಕೆಲೂರು, ಗಂಗಾಪುರ, ಕಕ್ಕೂರು, ನಾಗರಹಳ್ಳಿ, ಮಕ್ತಂಪುರ, ಶಿರನಹಳ್ಳಿ, ತಿಪ್ಪಾಪುರ, ಬಿದರಹಳ್ಳಿ, ವಿಠಲಾಪುರ, ಹಮ್ಮಗಿ, ಗುಮ್ಮಗೋಳ, ಸಿಂಗಟಾಲೂರು, ದಿಂಡೂರು ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಕಳೆದ ವರ್ಷ ಜಮೀನು ಖರೀದಿಸಲಾಗಿದೆ.
ಖರೀದಿಗೆ ಬಾಕಿಯಿರುವ ಗ್ರಾಮಗಳು: ಗದಗ ತಾಲೂಕಿನ ಲಿಂಗಧಾಳ, ಸೀತಾಲಹರಿ, ರೋಣ ತಾಲೂಕಿನ ತಳ್ಳಿಹಾಳ, ಬೆಳವಣಿಕಿ, ಗುಳಗುಳಿ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಗುರುತಿಸಿದ್ದು, ಖರೀದಿ ಪ್ರಕ್ರಿಯೆ ಬಾಕಿ ಉಳಿದಿವೆ.
1.25 ಕೋಟಿ ರೂ.ವೆಚ್ಚದಲ್ಲಿ ರುದ್ರಭೂಮಿ ಖರೀದಿ:ಕಳೆದೆರೆಡು ವರ್ಷಗಳಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ 10 ಗ್ರಾಮಗಳಲ್ಲಿ ರುದ್ರಭೂಮಿಗಳನ್ನು ಜಿಲ್ಲಾಡಳಿತ ಖರೀದಿ ಮಾಡಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಖರೀದಿಗೆ ಬಾಕಿಯಿರುವ ರುದ್ರಭೂಮಿಗಳನ್ನು ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಖಾಸಗಿ ಜಮೀನು ಅವಲಂಬನೆ
ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ರುದ್ರ ಭೂಮಿಗಳಿದ್ದರೂ, ಕೆಲ ಗ್ರಾಮಗಳಲ್ಲಿ ರುದ್ರ ಭೂಮಿಗಳಿಗೆ ತೆರಳಲು ಖಾಸಗಿ ಜಮೀನುಗಳನ್ನು ಅವಲಂಬಿಸಬೇಕಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಜಮೀನುಗಳ ಮಾಲೀಕರು ತಮ್ಮ ಜಮೀನಿನ ದಾರಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ರುದ್ರಭೂಮಿ ಸಮಸ್ಯೆ ತಲೆದೋರುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ಗ್ರಾಮಗಳನ್ನು ಕ್ರೋಢೀಕರಣ ಮಾಡಲಾ ಗುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಗದಗ ಜಿಲ್ಲೆಯಲ್ಲಿ ಈಗಾಗಲೇ ಸ್ವಶಾನ ಭೂಮಿಗಳಿಲ್ಲದ ಗ್ರಾಮಗಳನ್ನು ಪಟ್ಟಿ ಮಾಡಿ ಖರೀದಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲ ಗ್ರಾಮಗಳ ರುದ್ರಭೂಮಿ ಖರೀದಿ ಬಾಕಿ ಉಳಿದಿದ್ದು, ಕೂಡಲೇ ಸ್ಮಶಾನ ಭೂಮಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಇನ್ನುಳಿದಂತೆ ಸ್ಮಶಾನ ಭೂಮಿಗೆ ತೆರಳಲು ಖಾಸಗಿ ವ್ಯಕ್ತಿಗಳು ದಾರಿಯಲ್ಲಿ ಅಡೆತಡೆ ಮಾಡುತ್ತಿದ್ದು, ಕೆಲವೆಡೆ ಸಮಸ್ಯೆ ತಲೆದೋರಿದೆ. ಅಂತಹ ಸಮಸ್ಯೆಗಳನ್ನು ತಹಶೀಲ್ದಾರ್ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಅನ್ನಪೂರ್ಣ ಮುದಕಮ್ಮನವರ, ಆರು ಅಪರ ಜಿಲ್ಲಾಧಿಕಾರಿ *ಅರುಣಕುಮಾರ ಹಿರೇಮಠ