Advertisement
2007 ರಲ್ಲಿಯೇ ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾಗಿದ್ದು, ಆ ಸಮಯದಲ್ಲಿಯೇ ಗುಡಿಬಂಡೆ ತಾಲೂಕಿನಲ್ಲಿ ಉಪ ಮಾರುಕಟ್ಟೆಯನ್ನು ಪ್ರಾರಂಭಿಸಲು ಘೋಷಣೆ ಮಾಡಲಾಗಿತ್ತು ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಂದಿನಿಂದಲೂ ಉಪಮಾರುಕಟ್ಟೆ ಪ್ರಾರಂಭಿಸಲು ಎಪಿಎಂಸಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸೂಕ್ತ ಜಾಗ ಕೋರಿ ಹಗ್ಗ ಜಗ್ಗಾಟಗಳೇ ನಡೆದು ಹೋಗಿ, ಕಂದಾಯ ಇಲಾಖೆ ಜಾಗ ಗುರುತಿಸಿ ಕೊಟ್ಟರು, ಈಗ ಎಪಿಎಂಸಿ ಅಧಿಕಾರಿಗಳು ಮಾತ್ರ ಮಾರುಕಟ್ಟೆ ಸ್ಥಾಪಿಸಲು ಬೇಜಾಬ್ದಾರಿ ತನ ತೋರುತ್ತಿರುವುದು ದುರಂತ.
Related Articles
Advertisement
ಚುನಾವಣೆ ವೇಳೆ ಮಾತ್ರ ಅಭಿವೃದ್ಧಿ ಘೋಷಣೆ : ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳು ರೈತರನ್ನು ಓಲೈಕೆ ಮಾಡಲು ಶೀಘ್ರದಲ್ಲೇ ಗುಡಿಬಂಡೆ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಅದನ್ನು ಜಾರಿಗೆ ತರಲು ಮಾತ್ರ ಪ್ರಯತ್ನ ಪಡೆದ ಕಾರಣ, ರಾಜಕಾರಣಿಗಳ ಬೇಜವಾಬ್ದಾರಿ ತನಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಪ್ರಮುಖವಾಗಿ ಕೃಷಿಯೇ ಅದಾಯ ಮೂಲವಾಗಿದ್ದು, ಇಲ್ಲಿ ಸ್ಥಳಿಯವಾಗಿ ಮಾರುಕಟ್ಟೆ ಇಲ್ಲದೆ, ಬೇರೆಡೆಗೆ ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಾರುಕಟ್ಟೆ ಪ್ರಾರಂಭಿಸಬೇಕು. ●ಮಧು.ವೈ. ಪಿ.ಎಸ್.ಎಸ್.ಮುಖಂಡ, ಹಳೇ ಯರ್ರಹಳ್ಳಿ
ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದ ಕಾರಣ ಬೇರೆಡೆಗೆ ಹೋಗಿ ಮಾರಾಟ ಮಾಡಬೇಕಾಗಿದ್ದು, ಇದರಿಂದ ಬರುವ ಆದಾಯವೂ ಕಡಿಮೆಯಾಗಿ, ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಶೀಘ್ರದಲ್ಲೇ ತಾಲೂಕಿನಲ್ಲಿ ಮಾರುಕಟ್ಟೆ ಸ್ಥಾಪನೆ ಮಾಡಲು ಕ್ರಮ ವಹಿಸಬೇಕು. -ಪಿ.ಆರ್.ಸುದೀಪ್, ರೈತ, ಪೋಲಂಪಲ್ಲಿ
- ನವೀನ್‌ಕುಮಾರ್