Advertisement

Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್‌

07:54 PM Jan 01, 2025 | |

ಮುಂಬೈ: ಹೊಸ ವರ್ಷದ ಮೊದಲ ದಿನವಾದ ಬುಧವಾರ ಷೇರುಪೇಟೆ ವಹಿವಾಟು ಏರಿಕೆ ಕಂಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 368 ಅಂಕಗಳ ಏರಿಕೆ ಕಂಡಿದ್ದು, 78,507 ಅಂಕಗಳಲ್ಲಿ ವಹಿವಾಟನ್ನು ಕೊನೆಗೊಳಿಸಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ, ನಿಫ್ಟಿ 98 ಅಂಕಗಳ ಏರಿಕೆಯೊಂದಿಗೆ 23742 ಅಂಕಗಳಿಗೆ ಏರಿದೆ.

ಸೆನ್ಸೆಕ್ಸ್‌ ಬುಧವಾರದ ವಹಿವಾಟಿನ ವೇಳೆ 617 ಅಂಕಗಳ ಏರಿಕೆಯನ್ನೂ ಕಂಡಿತ್ತು. ಮಾರುತಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಎಲ್‌ ಆ್ಯಂಡ್‌ ಟಿ, ಬಜಾಜ್‌ ಫೈನಾನ್ಸ್‌, ಟಾಟಾ ಮೋಟರ್ಸ್‌ ಷೇರುಗಳು ಏರಿಕೆ ಕಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next