Advertisement

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

09:00 AM Dec 21, 2024 | Team Udayavani |

ಬರ್ಲಿನ್: ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿರುವ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಶುಕ್ರವಾರ(ಡಿ.20)  ಸಂಜೆ ದುರಂತವೊಂದು ನಡೆದಿದ್ದು ಮಗು ಸೇರಿ ಕನಿಷ್ಠ ಇಬ್ಬರು ಮೃತಪಟ್ಟು ಅರುವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

ಕ್ರಿಸ್‌ಮಸ್ ಮಾರುಕಟ್ಟೆಗೆ ವ್ಯಕ್ತಿಯೋರ್ವ ಉದ್ದೇಶಪೂರ್ವಕವಾಗಿ ಜನಸಮೂಹದ ಮೇಲೆ ಕಾರು ಹತ್ತಿಸಿದ ಪರಿಣಾಮ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಸುಮಾರು ೬೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ರಕ್ಷಣಾ ತಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ವಿದೇಶಿ ಸುದ್ದಿ ಸಂಸ್ಥೆ ವರದಿಮಾಡಿದೆ.

ಘಟನೆಗೆ ಸಂಬಂಧಿಸಿ ಜರ್ಮನಿ ಪೊಲೀಸರು ಸೌದಿ ಅರೇಬಿಯಾದ ವೈದ್ಯ ತಲೇಬ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕ್ರಿಸ್ಮಸ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಸ್ತುಗಳನ್ನು ಖರಿಸದಿಸಲು ಬರುತ್ತಾರೆ ಈ ಉದ್ದೇಶ ಇಟ್ಟುಕೊಂಡೆ ವ್ಯಕ್ತಿ ದಾಳಿ ನಡೆಸಿರಬಹುದು ಇದರ ಹಿಂದೆ ಏನೋ ದೊಡ್ಡ ಉದ್ದೇಶ ಇದ್ದಿರಬೇಕು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ರಾಯಿಟರ್ಸ್ ಮಾಹಿತಿಯ ಪ್ರಕಾರ ವೈದ್ಯರು ಜರ್ಮನಿಯಲ್ಲಿ ಶಾಶ್ವತ ನಿವಾಸವನ್ನು ಹೊಂದಿದ್ದು ಸುಮಾರು ಎರಡು ದಶಕಗಳಿಂದ ಇಲ್ಲಿ ವಾಸವಾಗಿದ್ದಾರೆ ಎಂದು ಉಲ್ಲೇಖಿಸಿದೆ.

ಘಟನೆ ಸಂಬಂಧ ಮಾಹಿತಿ ನೀಡಿದ ಜರ್ಮನ್ ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ ಘಟನೆಗೆ ಸಂಬಂಧಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗಾಗಿ ಯಾವುದೇ ತೊಂದರೆ ಇಲ್ಲ ಆದರೆ ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದನ್ನು ತನಿಖೆ ನಡೆಸಬೇಕಾಗಿದೆ ಅಲ್ಲದೆ ಘಟನೆಗೆ ಬಳಸಿದ ಕಾರು ವ್ಯಕ್ತಿಗೆ ಸೇರಿದ್ದಲ್ಲ ಬಾಡಿಗೆಗೆ ಪಡೆದುಕೊಂಡ ಕಾರು ಹಾಗಾಗಿ ಇದರ ಹಿಂದೆ ಏನಾದರೂ ದೊಡ್ಡ ಉದ್ದೇಶ ಇದ್ದಿರುವ ಸಂಶಯ ಕೂಡ ಇದೆ ಎನ್ನಲಾಗಿದ್ದು ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಘಟನೆ ಸಂಬಂಧ ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೈಝರ್ ಹೇಳಿಕೆ ನೀಡಿದ್ದು ಇದೊಂದು ಆತಂಕಕಾರಿ ಘಟನೆ ಕ್ರಿಸ್ಮಸ್ ಸಮಯದಲ್ಲಿ ಇಂತಹ ಘಟನೆಗಳು ನಡೆದಿರುವುದು ಆಘಾತ ತಂದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next