Advertisement
16 ವರ್ಷದ ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ತಾಯಿ ಮತ್ತು ದತ್ತು ಪಡೆಯಲು ಮುಂದಾಗಿರುವ ಬೆಂಗಳೂರಿನ ಮುಸ್ಲಿಂ ದಂಪತಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಹೇಮಂತ್ ಚಂದನಗೌಡರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಮಗುವಿನ ತಂದೆಯ ಸಮ್ಮತಿ ಪತ್ರವನ್ನು ಕೇಳದೆ 2024ರ ನ. 11ರ ದತ್ತು ಡೀಡ್ ನೋಂದಣಿ ಮಾಡಬೇಕು ಎಂದು ಯಲಹಂಕ ಸಬ್ ರಿಜಿಸ್ಟ್ರಾರ್ಗೆ ನಿರ್ದೇಶನ ನೀಡಿದೆ.
ದತ್ತು ಪ್ರಕ್ರಿಯೆ ನಡೆಯದಿದ್ದರೆ ಮಗುವು ಸಂವಿಧಾನದ ಕಲಂ 21ರ ಪ್ರಕಾರ ಜೀವಿಸುವ ಹಕ್ಕಿನಿಂದ ವಂಚಿತವಾಗುತ್ತದೆ. ಆದ್ದರಿಂದ ಒಟ್ಟಾರೆ ಮಗುವಿನ ಬೆಳವಣಿಗೆ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಶಾಸನಾತ್ಮಕ ಹಕ್ಕಿಗಿಂತ ನೈತಿಕತೆ ಆಧಾರದ ಮೇಲೆ ಇಡೀ ಪ್ರಕರಣವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Related Articles
ಅರ್ಜಿದಾರರು 2023ರ ನ.1ರಿಂದ 2024ರ ಜೂ.20ರ ನಡುವೆ ಅತ್ಯಾಚಾರಕ್ಕೆ ಒಳಗಾಗಿದ್ದರು. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆ ನಡುವೆ 2024ರ ಸೆ.30ರಂದು ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿನ ತಂದೆ (ಆರೋಪಿ) ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹಾಗಾಗಿ ತಂದೆಯ ಅನುಮತಿ ಅನಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
Advertisement