Advertisement
ಆದರೆ ಡಿಜಿಟಲ್ ಹಣಕಾಸು ವ್ಯವಹಾರದಲ್ಲಿ ವಂಚನೆಯ ಪ್ರಕರಣಗಳು ಕೂಡ ತೀವ್ರವಾಗಿ ಏರುತ್ತಿರುವುದು ಗಂಭೀರ ವಿಷಯವಾಗಿ ಪರಿಣಮಿಸಿದೆ. ಕಳೆದ ಒಂದು ದಶಕದಿಂದ ಸೈಬರ್ ಅಪರಾಧವು ಹೊಸ ಸವಾಲುಗಳನ್ನು ಒಡ್ಡುತ್ತಿರುವುದು ಆತಂಕದ ವಿಷಯವಾಗಿದೆ.
Related Articles
Advertisement
ಇಂತಹ ಸಮಸ್ಯೆಗಳಿಂದ ಪಾರಾಗಲು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಯಾವುದೇ ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದೂ ಕೂಡ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಹೀಗಾಗಿ ತನಿಖಾ ಸಂಸ್ಥೆಯ ಅಧಕಾರಿಗಳೆಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಾಗ ಯಾವುದಕ್ಕೂ ಭಯಕ್ಕೊಳಗಾಗಬಾರದು. ಕರೆಯನ್ನು ಸ್ಥಗಿತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹ ಕರೆಗಳನ್ನು ಬ್ಲಾಕ್ ಮಾಡಬೇಕು. ವಂಚನೆಯ ಬಗ್ಗೆ ಅನುಮಾನ ಬಂದರೆ ಕೂಡಲೇ ಸೈಬರ್ ಸಹಾಯವಾಣಿ/ ಪೊಲೀಸರನ್ನು ಸಂಪರ್ಕಿಸಬೇಕು.
ರಾಷ್ಟ್ರೀಯ ಮಟ್ಟದಲ್ಲಿ ಸಿಟಿಜನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಆ್ಯಂಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅನ್ನು ರೂಪಿಸಲಾಗಿದೆ. 2021ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ದೂರು ನೀಡುವ ಪೋರ್ಟಲ್ ಡಬ್ಲ್ಯುಡಬ್ಲ್ಯುಡಬ್ಲ್ಯು. ಸೈಬರ್ ಕ್ರೈಮ್.ಜಿವೊವಿ. ಇನ್ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸೈಬರ್ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ 1930 ಸಹಾಯವಾಣಿಯನ್ನೂ ಕೂಡ ಆರಂಭಿಸಲಾಗಿದೆ. ಅಪರಿಚಿತ ಅಂತಾರಾಷ್ಟ್ರೀಯ ಫೋನ್ ಕರೆಗಳ ಬಗ್ಗೆ ಎಚ್ಚರವಹಿಸಬೇಕು.
ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಖಾಸಗಿ ವಿಷಯಗಳನ್ನು, ಗೌಪ್ಯ ಮಾಹಿತಿಯನ್ನುಹಂಚಿಕೊಳ್ಳಬಾರದು. ಡಿಜಿಟಲ್ ಅರೆಸ್ಟ ವಂಚಕರಲ್ಲಿ ಬಹುತೇಕರು ದೇಶದ ಹೊರಗಡೆಯಿಂದ ಕಾರ್ಯಾಚರಣೆ ನಡೆಸುತ್ತಾರೆ. ಮ್ಯಾನ್ಮಾರ್, ಲಾವೊಸ್, ತೈವಾನ್, ಕಾಂಬೋಡಿಯಾದಂತಹ ದೇಶಗಳಲ್ಲಿ ಕುಳಿತು ಕರೆ ಮಾಡಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಡಿಜಿಟಲ್ ಮೋಸಕ್ಕೆ ವಂಚಕರು ಎಐ ಎಪಿಕೆ ಎನ್ನುವ ಸಾಫ್ಟವೇರ್ ಮೂಲಕ ವಾಟ್ಸಾಪ್ ಗ್ರುಪ್‌ಗಳಿಗೆ ಲಗ್ಗೆ ಇಟ್ಟು ಇಡೀ ಗ್ರುಪ್‌ನ ಸದಸ್ಯರನ್ನು ವಂಚಿಸುತ್ತಾರೆ. ಎಐ ಎಪಿಕೆ ಸಾಫ್ಟವೇರ್ ಅನ್ನು ಮೊದಲು ವಂಚಕರು ರವಾನಿಸುತ್ತಾರೆ. ಮೊಬೈಲ್‌ನಲ್ಲಿ ಈ ಎಐ ಎಪಿಕೆ ಸಾಫ್ಟವೇರ್ ಡೌನ್ ಲೋಡ್ ಆಗುತ್ತಿದ್ದಂತೆ ಮೊಬೈಲ್ ಹ್ಯಾಕ್ ಆಗುತ್ತದೆ. ಆಗ ವಂಚಕರು ಮೊಬೈಲ್‌ನ ಆಕ್ಸೆಸ್ ಪಡೆದುಕೊಂಡು ನಂತರ ವಾಟ್ಸಾಪ್ ಗ್ರುಪ್‌ಗೆ ಆಡ್ಮಿನ್ ಆದವರೇ ಹೆಸರು ಸೇರ್ಪಡೆ ಮಾಡಿದಂತೆ ತಮ್ಮ ನಂಬರನ್ನು ಸೇರಿಸುತ್ತಾರೆ.
ನಂತರ ವಂಚಕರೇ ಅವರ ಮೊಬೈಲ್‌ನಿಂದ ಬ್ಯಾಂಕ್, ಗೇಮ್ಸ್ ಅಥವಾ ವಿವಿಧ ಬಗೆಯ ಆನ್‌ಲೈನ್ ಸಾಫ್ಟವೇರ್‌ಗಳನ್ನು ಎಐ ಎಪಿಕೆ ಸಾಫ್ಟವೇರ್ ಮೂಲಕ ಹರಿಬಿಟ್ಟು ಕೆವೈಸಿ ಅಪ್‌ಡೇಟ್ ಅಥವಾ ಇತರೆ ಡೌನ್ ಲೋಡ್ ಮಾಡಿಕೊಳ್ಳಲು ಹಲವಾರು ಗುರುತುಗಳನ್ನು ಕಳಿಸಿ ಇದನ್ನು ಕ್ಲಿಕ್ ಮಾಡಿಕೊಳ್ಳಲು ಸೂಚಿಸುತ್ತಾರೆ.
ಆ ಮೂಲಕ ಡಿಜಿಟಲ್ ವಹಿವಾಟಿನ ಮಾಹಿತಿ ಸಂಗ್ರಹಿಸಿ ಹಣ ವಂಚನೆ ಮಾಡುತ್ತಾರೆ. ಹೀಗಾಗಿ ಮೊಬೈಲ್ ಗಳಿಗೆ ಬರುವ ಅನಗತ್ಯ ಆ್ಯಪ್, ಸಾಫ್ಟವೇರ್ ಮೇಲೆ ಕ್ಲಿಕ್ ಮಾಡುವುದನ್ನು ನಿಲ್ಲಿಸುವುದು ಕೂಡ ಒಂದು ಪರಿಹಾರವಾಗಬಲ್ಲದು.
ರಾಜು ಭೂಶೆಟ್ಟಿ
ಹುಬ್ಬಳ್ಳಿ