Advertisement

ಶತದಿನ ಪೂರೈಸಿದ ಸರ್ಕಾರಕ್ಕೆ ಪತನ ಭೀತಿ

06:00 AM Sep 13, 2018 | |

ಸಮ್ಮಿಶ್ರ ಸರ್ಕಾರಕ್ಕೆ 100 ದಿನ ತುಂಬುತ್ತಲೇ ಸರ್ಕಾರ ಪತನಗೊಳಿಸುವ ಪ್ರಯತ್ನವೂ ನಡೆಯುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಕಸರತ್ತಿನಲ್ಲಿ ತೊಡಗಿವೆ. ಮತ್ತೂಂದೆಡೆ, ಹೇಗಾದರೂ ಮಾಡಿ ಸರ್ಕಾರ ಬೀಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ರಾಜ್ಯದ ರಾಜಕಾರಣ ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ, ಬಿ.ಎಸ್‌.ಯಡಿಯೂರಪ್ಪ ಸುತ್ತಲೇ ಕೇಂದ್ರೀಕೃತವಾಗಿದೆ. ಮೂರೂ ಪಕ್ಷಗಳ ಸಾಧ್ಯತೆ-ಸವಾಲುಗಳ ಕುರಿತ ವರದಿ ಇಲ್ಲಿದೆ.

Advertisement

ಸಿದ್ದರಾಮಯ್ಯ
ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಸೂತ್ರದಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಳ್ಳುವ ಈ ಬೆಳವಣಿಗೆಗಳ ಬಗ್ಗೆ ಮಾತುಕತೆಗಳು ಕೇಳಿ ಬಂಸಮ್ಮಿಶ್ರ ಸರ್ಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಜಾರಕಿಹೊಳಿ ಸಹೋದರರ ಅಸ್ತ್ರ ಪ್ರಯೋಗಿಸಿ ಮಾತುಗಳು ಕೇಳಿ ಬರುತ್ತಿವೆ. ಇದು ಕಾಂಗ್ರೆಸ್‌ನ ಇತರ ನಾಯಕರಿಗೆ ಬಿಸಿ ತುಪ್ಪವಾಗಿದೆ.

ಶಾಸಕರ ಹಿಡಿದಿಟ್ಟುಕೊಳ್ಳುವ ಆತಂಕ
ಸಾಧ್ಯತೆ

– ಜಾರಕಿಹೊಳಿ ಸಹೋದರರು ತಮಗೆ ಹಿನ್ನಡೆಯಾಗಿರುವುದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ಶಾಸಕರ ಪಡೆ ಕಟ್ಟಬಹುದು.
– ಕಾಂಗ್ರೆಸ್‌ನಲ್ಲೇ ಇದ್ದು ಬೆದರಿಕೆ ಹಾಕುವ ಮೂಲಕ ಹೆಚ್ಚಿನ ಅಧಿಕಾರ ಪಡೆಯಬಹುದು.
– ಸಿದ್ದರಾಮಯ್ಯ ಬಂದ ನಂತರ ಸಂಧಾನದ ಮಾತುಕತೆ ನಡೆದು ಬಂಡಾಯ ತಣ್ಣಗಾಗಬಹುದು.
– ಅಂತಿವಾಗಿ ಡಿ.ಕೆ.ಶಿವಕುಮಾರ್‌ಗೆ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಸೂಚಿಸಬಹುದು. ಜಾರಕಿಹೊಳಿ ಸಹೋದರರಿಗೆ ಮಣೆ ಹಾಕಬಹುದು.

ಸವಾಲು
– ಆಪರೇಷನ್‌ ಕಮಲ ಕಾರ್ಯಾಚರಣೆಯಾದರೆ ಶಾಸಕರ ಹಿಡಿದಿಟ್ಟುಕೊಳ್ಳುವ ಆತಂಕ.
–  ಶಾಸಕರಿಗೆ ಮಂತ್ರಿ ಸ್ಥಾನದ ಆಮಿಷವೊಡ್ಡಿ ಹಿಡಿದಿಟ್ಟುಕೊಂಡು ಅವಕಾಶ ಕೊಡದೆ ಕಷ್ಟಕ್ಕೆ ಸಿಲುಕಬಹುದು.
– ಲೋಕಸಭೆ ಚುನಾವಣೆಗೂ ಮೊದಲೇ ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ.
– ರಾಷ್ಟ್ರಮಟ್ಟದಲ್ಲಿಯೂ ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಭಯ. ಜತೆಗೆ ಬಿಜೆಪಿ ವಿರೋಧಿ ಪಕ್ಷಗಳು ಕಾಂಗ್ರೆಸ್‌ ಪಕ್ಷವನ್ನು ನಂಬದ ಸ್ಥಿತಿ ಉಂಟಾಗಬಹುದು.

ಬಿ.ಎಸ್‌. ಯಡಿಯೂರಪ್ಪ
ಬಿಜೆಪಿಯಲ್ಲಿ ಯಾರಿಗೆ ಇಷ್ಟ ಇದೆಯೋ, ಇಲ್ಲವೋ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಮ್ಮಿಶ್ರ ಸರ್ಕಾರ ಪತನಗೊಂಡರೆತಾವುಮುಖ್ಯಮಂತ್ರಿಯಾಗಬಹುದು ಎಂಬ ಆಸೆ ಚಿಗುರೊಡೆದಿದೆ. ಹೀಗಾಗಿ, ನಾವು ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿಲ್ಲ ಎಂದು ಹೇಳುತ್ತಲೇ ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರ ಸಂಪರ್ಕದಲ್ಲಿದ್ದಾರೆ. ಇದು ಒಂದು ರೀತಿಯಲ್ಲಿ ಅವರ ಕೊನೇ ಆಟ.

Advertisement

ಬಂಡಾಯ ಎದುರಾಗುವ ಭೀತಿ ಸಾಧ್ಯತೆ 
ಸಾಧ್ಯತೆ

– ಕಾಂಗ್ರೆಸ್‌-ಜೆಡಿಎಸ್‌ನ 20 ಶಾಸಕರನ್ನು ಸೆಳೆಯುವುದು.
– ಸಮ್ಮಿಶ್ರ ಸರ್ಕಾರದ 118 ಸಂಖ್ಯಾಬಲವನ್ನು 102 ಕ್ಕೆ ಇಳಿಸುವುದು.
– ಬಿಜೆಪಿ 104 ಸಂಖ್ಯಾಬಲ ಹೊಂದಿರುವುದರಿಂದ ಆಗ ಪರ್ಯಾಯ ಸರ್ಕಾರ ರಚನೆಗೆ ಅವಕಾಶ ಸಿಗಬಹುದು.
– ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬರುವ 10 ಮಂದಿಗೆ ಸಚಿವ ಸ್ಥಾನ ಆಮಿಷವನ್ನು ಒಡ್ಡಬಹುದು.
– ಲೋಕಸಭೆ ಚುನಾವಣೆ ಒಳಗೆ ಇದು ಕಾರ್ಯಗತ ಆದರೆ ಬಿಜೆಪಿಗೆ ಲಾಭವಾಗಬಹುದು.

ಸವಾಲು
– ಆಪರೇಷನ್‌ ಕಮಲ ಮೂಲಕ ಕರೆತರುವ 20 ಮಂದಿ ಪೈಕಿ 10 ಮಂದಿಯನ್ನು ಸಚಿವರಾಗಿಸಬೇಕು.
– ಬಿಜೆಪಿಗೆ ಕರೆತರಲು ಯತ್ನಿಸುತ್ತಿರುವ ಶಾಸಕರ ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳ ವಿರೋಧ ಸಾಧ್ಯತೆ.
– ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದವರನ್ನು ಗೆಲ್ಲಿಸಲು ಹರಸಾಹಸ ಪಡಬೇಕು.
– ಆಪರೇಷನ್‌ ಕಮಲಕ್ಕೆ ಪ್ರತಿಯಾಗಿ ಕಾಂಗ್ರೆಸ್‌-ಜೆಡಿಎಸ್‌ ಬಿಜೆಪಿ ಶಾಸಕರಿಗೆ ಕೈ ಹಾಕುವ ಆತಂಕ.
– ಕೇಂದ್ರ ಬಿಜೆಪಿ ನಾಯಕರು ಕೊನೇಹಂತದಲ್ಲಿ ಸುಮ್ಮನಾಗಿಸಿದರೆ ಎಂಬ ಅನುಮಾನ.

ಎಚ್‌.ಡಿ.ದೇವೇಗೌಡ
ರಾಜಕಾರಣದಲ್ಲಿ ತಂತ್ರಗಾರಿಕೆಗೆ ಹೆಸರಾದ ಎಚ್‌.ಡಿ. ದೇವೇಗೌಡರು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಬಾರದಂತೆ
ತಮ್ಮೆಲ್ಲಾ ಪಟ್ಟುಗಳನ್ನು ಹಾಕುತ್ತಿದ್ದಾರೆ. ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿತಂತ್ರವನ್ನೂ ಹಾಕುತ್ತಿದ್ದಾರೆ. ಜತೆಗೆ,
ತಮ್ಮ ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ತಾವೇ ಖುದ್ದಾಗಿ ಶಾಸಕರ ಜತೆ ಸಮಾಲೋಚನೆ ನಡೆಸಿದ್ದಾರೆ.
ಸರ್ಕಾರಕ್ಕೆ ಏನೂ ಆಗುವುದಿಲ್ಲ, ನಿಮ್ಮ ಭವಿಷ್ಯ ನನಗೆ ಬಿಡಿ ಎಂದು ಭರವಸೆ ನೀಡಿದ್ದಾರೆ.

ಅಸಮಾಧಾನಿತರ ಬೇಡಿಕೆ ಸವಾಲು
ಸಾಧ್ಯತೆ

– ಸಚಿವಗಿರಿ ಸಿಗದೆ ಅತೃಪ್ತಗೊಂಡ ಶಾಸಕರಿಗೆ ನಿಗಮ-ಮಂಡಳಿ ಸ್ಥಾನ ಕೊಟ್ಟು ಸಮಾಧಾನಪಡಿಸುವುದು.
– ಬಿಜೆಪಿಯ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳಗಾಗದಂತೆ ನೋಡಿಕೊಳ್ಳುವುದು.
– ಬಿಜೆಪಿಯಲ್ಲಿ ಅತೃಪ್ತಗೊಂಡ ಶಾಸಕರನ್ನು ಸೆಳೆಯಲು ಪ್ರಯತ್ನಿಸುವುದು. 
– ಜಾರಕಿಹೊಳಿ ಸಹೋದರರ ಬೇಡಿಕೆಗೆ ಮಣಿಯುವುದು.
– ಸಮುದಾಯದ ಮೂಲಕ ಬಿಜೆಪಿ ವಿರುದಟಛಿ ಪರೋಕ್ಷ ಸಮರ ಸಾರುವುದು.

ಸವಾಲು
– ಸಚಿವ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸುವುದು.
– ಅಸಮಾಧಾನಗೊಂಡಿರುವ ಶಾಸಕರು ಸಚಿವ ಸ್ಥಾನದ ಬೇಡಿಕೆ ಇಟ್ಟರೆ ಕಷ್ಟವಾಗಬಹುದು.
– ಶಾಸಕರಿಗಷ್ಟೇ ನಿಗಮ-ಮಂಡಳಿ ಅಧ್ಯಕ್ಷಗಿರಿ ಕೊಟ್ಟರೆ ಮುಖಂಡರಿಂದ ಆಕ್ರೋಶ.
– ಬಿಜೆಪಿಯತ್ತ ತೋರಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಆರ್ಥಿಕ ನೆರವು ಕೋರಬಹುದು.
– ವರ್ಗಾವಣೆ ವಿಚಾರದಲ್ಲಿ ತಮ್ಮ ಮಾತು ನಡೆಯಬೇಕೆಂದು ಎಲ್ಲರೂ ಪಟ್ಟು ಹಿಡಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next