Advertisement

Belagavi session ಡಿ.19ಕ್ಕೆ ಅಧಿವೇಶನ ಮೊಟಕು: ಇಂದು ನಿರ್ಧಾರ

11:11 PM Dec 08, 2024 | Team Udayavani |

ಬೆಳಗಾವಿ: ಇಲ್ಲಿ ಡಿ. 9ರಿಂದ ಡಿ.20ರ ವರೆಗೆ ನಿಗದಿಯಾಗಿರುವ ವಿಧಾನಮಂಡಲ ಅ ಧಿವೇಶನವು ಈ ಬಾರಿಯೂ ಸಹ ಮಾದರಿಯಾಗುವ ರೀತಿಯಲ್ಲಿ ನಡೆಯಲು ಎಲ್ಲರ ಸಹಕಾರ ಕೋರುತ್ತೇನೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

Advertisement

ರವಿವಾರ ಮಧ್ಯಾಹ್ನ ಅ ಧಿವೇಶನಕ್ಕೆ ನಡೆಯುತ್ತಿರುವ ಅಂತಿಮ ಹಂತದ ತಯಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಸೋಮವಾರ ಬೆಳಗ್ಗೆ 11ರಿಂದ ಅ ಧಿವೇಶನ ಆರಂಭವಾಗಲಿದೆ. ಇದಕ್ಕೂ ಮೊದಲು ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್‌ ತೈಲ ವರ್ಣದ ಚಿತ್ರದ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಾಪ ಮೊಟಕಿಲ್ಲ
ನಿಗದಿಯಂತೆ ಡಿ. 9ರಿಂದ 20 ರ ವರೆಗೆ ಕಲಾಪಗಳು ನಡೆಯಲಿವೆ. ಡಿ.19ಕ್ಕೆ ಅ ಧಿವೇಶನ ಮೊಟಕುಗೊಳ್ಳುವುದಿಲ್ಲ. ಮಂಡ್ಯದಲ್ಲಿ ಅಖೀಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ಇರುವ ಹಿನ್ನೆಲೆಯಲ್ಲಿ ಡಿ.19ಕ್ಕೆ ಕಲಾಪ ಸಂಪನ್ನಗೊಳಿಸುವ ಚರ್ಚೆ ಸರಕಾರದ ಮಟ್ಟದಲ್ಲಿ ನಡೆದಿರಬಹುದು. ಆದರೆ, ಅದಕ್ಕೂ ಇದಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ. ಕನಿಷ್ಠ 10 ದಿನವಾದರೂ ಕಲಾಪ ನಡೆಸಬೇಕಿದೆ ಎಂದು ಸ್ಪಷ್ಟಪಡಿಸಿದರು.

ಡಿ. 9ರಿಂದ ಡಿ. 20ರ ವರೆಗೆ ಕಲಾಪ ನಡೆಸಲು ಈಗಾಗಲೇ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದರಿಂದ ಕಲಾಪ ವಿಸ್ತರಣೆ ಅಥವಾ ಮೊಟಕು ಇತ್ಯಾದಿ ತೀರ್ಮಾನಗಳು ಸಲಹಾ ಸಮಿತಿ ಸಭೆಯಲ್ಲೇ ನಿರ್ಣಯ ಆಗಬೇಕಿದೆ. ಹೀಗಾಗಿ ಸೋಮವಾರ ದಿನ ಮೊದಲಾರ್ಧ ಕಲಾಪ ಮುಗಿಯುತ್ತಿದ್ದಂತೆ ಸಲಹಾ ಸಮಿತಿ ಸಭೆ ಕರೆಯಲಾಗಿದ್ದು ಈ ಸಂದರ್ಭದಲ್ಲಿ ಕಲಾಪವನ್ನು ಡಿ.19ಕ್ಕೆ ಮೊಟಕುಗೊಳಿಸುವ ನಿರ್ಣಯಕ್ಕೂ ಬರಬಹುದು ಎನ್ನಲಾಗಿದೆ.

ನೂತನ ಶಾಸಕರ ಪ್ರಮಾಣ ವಚನ
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಮೊದಲ ದಿನವಾದ ಸೋಮವಾರ ಪ್ರಮಾಣ ವಚನ ಬೋಧಿ ಸಲಾಗುತ್ತದೆ. ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್‌, ಶಿಗ್ಗಾವಿಯಿಂದ ಯಾಸಿರ್‌ ಪಠಾಣ್‌, ಸಂಡೂರಿನಿಂದ ಗೆದ್ದಿರುವ ಅನ್ನಪೂರ್ಣ ಪ್ರತಿಜ್ಞಾ ವಿ ಧಿ ಸ್ವೀಕರಿಸಲಿದ್ದಾರೆ.

Advertisement

8 ಮಸೂದೆ ಮಂಡನೆ
ಬೆಳಗಾವಿ: ವಿಫ‌ಲ ಕೊಳವೆಬಾವಿಗಳನ್ನು ಸೂಕ್ತ ರೀತಿಯಿಂದ ಮುಚ್ಚದ ಸ್ವತ್ತಿನ ಮಾಲಕರ ವಿರುದ್ಧ ಕ್ರಮ ಜರುಗಿಸುವುದು, ಖನಿಜ ಹಕ್ಕು ಮತ್ತು ಖನಿಜ ಇರುವ ಭೂಮಿಯ ಮೇಲೆ ತೆರಿಗೆ ವಿಧಿಸುವುದಕ್ಕೆ ಅನುಕೂಲ ಆಗುವ ಮಸೂದೆಗಳು ಸೇರಿ 8 ಮಸೂದೆಗಳು ಪ್ರಸ್ತುತ ಅಧಿವೇಶನದಲ್ಲಿ ಮಂಡನೆಯಾಗಲಿವೆ.

ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿ ಬೀಳುವ, ಸಾವಿಗೀಡಾದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಭವಿಸಿದ್ದು, ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ನಿಯಂತ್ರಣ) (ತಿದ್ದುಪಡಿ)ಮಸೂದೆ ಹಾಗೂ ಕರ್ನಾಟಕ ನೀರಾವರಿ ಕಾಯ್ದೆ 1965ಕ್ಕೆ ತಿದ್ದುಪಡಿ ತರಲು ಸರಕಾರ ಯೋಚಿಸಿದೆ. ರಾಜ್ಯದ ಪ್ರವಾಸಿತಾಣಗಳಲ್ಲಿ ರೋಪ್‌ ವೇ ನಿರ್ಮಾಣ ಮಾಡಲು ಅನುಕೂಲ ಆಗುವಂತೆ ಕರ್ನಾಟಕ ಪ್ರವಾಸೋದ್ಯಮ ರೋಪ್‌ ವೇಗಳ ಮಸೂದೆ ಮಂಡನೆಯಾಗಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next