Advertisement
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪಾಕ್ ಮೂಲದ ಮನಮೋಹನ್ ಸಿಂಗ್, ಗುಜ್ರಾಲ್, ಆಡ್ವಾಣಿ ಅವರು ದೇಶದ ಪ್ರಧಾನಿ, ಉಪ ಪ್ರಧಾನಿ ಆಗಲು ಸಾಧ್ಯವಾಯಿತು. ಆದರೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಯಾರೊಬ್ಬರೂ ಪಂಚಾಯತ್ ಚುನಾ ವಣೆಯಲ್ಲಿ ಸ್ಪರ್ಧಿಸಲು ಅಥವಾ ಜಮ್ಮು-ಕಾಶ್ಮೀರ ವಿಧಾನಸಭೆ ಸದಸ್ಯರಾಗಲು ಆಗಲಿಲ್ಲ. ಇದಕ್ಕೆ ಕಾರಣ 370ನೇ ವಿಧಿ! ನೆಹರೂ ಇದೇ ವಿಧಿಗೆ ಆದ್ಯತೆ ನೀಡಿದ್ದರು. ಶ್ಯಾಮ ಪ್ರಸಾದ್ ಮುಖರ್ಜಿ 370ನೇ ವಿಧಿ ವಿರುದ್ಧ ಧ್ವನಿ ಎತ್ತಿ, ಅದಕ್ಕಾಗಿಯೇ ಜೀವತೆತ್ತರು. ಅವರ ತಾಯಿ ತನಿಖೆ ಕೋರಿ ನೆಹರೂಗೆ ಪತ್ರ ಬರೆ ದರೂ ಅದನ್ನೂ ನಿರ್ಲಕ್ಷಿಸಲಾಯಿತು ಎಂದಿದ್ದಾರೆ.
ನಿಜಕ್ಕೂ ಕಾಂಗ್ರೆಸ್‌ಗೆ ತುರ್ತು ಪರಿ ಸ್ಥಿತಿ ಹೇರಿಕೆ ಬಗ್ಗೆ ಪಶ್ಚಾತ್ತಾಪವಿದ್ದರೆ 2025ರ ಜೂ.25ರಂದು ಸರಕಾರ ನಡೆಸಲಿರುವ ಸಂವಿಧಾನ ಹತ್ಯಾ ದಿನ ದಲ್ಲಿ ಪಾಲ್ಗೊಳ್ಳಲಿ ಎಂದು ನಡ್ಡಾ ಹೇಳಿದ್ದಾರೆ.