Advertisement

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

01:20 AM Dec 13, 2024 | Team Udayavani |

ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್‌ ವಿಚಾರವು ಗುರುವಾರ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತಲ್ಲದೆ, ಲಾಠಿಚಾರ್ಜ್‌ ಮಾಡಿದ ತನ್ನ ನಿಲುವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸರಕಾರದ ಉತ್ತರ ಖಂಡಿಸಿ ವಿಪಕ್ಷ ಬಿಜೆಪಿ ಸಭಾತ್ಯಾಗ ನಡೆಸಿತು.

Advertisement

ಸರಕಾರವು ಸಮುದಾಯದ ಕ್ಷಮೆ ಕೇಳಬೇಕು, ಹೋರಾಟರರ ಮೇಲಿನ ಪ್ರಕರಣ ಹಿಂಪಡೆಯಬೇಕು, ಅಧಿಕಾರಿ ವಿರುದ್ಧ ಕ್ರಮ ಜರಗಿಸಬೇಕು, ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದರೆ, ತನಿಖೆಯನ್ನಾಗಲೀ, ಅಧಿಕಾರಿ ಮೇಲೆ ಕ್ರಮವನ್ನಾಗಲೀ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಸಮರ್ಥಿಸಿಕೊಂಡರು.

ಅಲ್ಲದೆ ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ ಅನ್ಯಾಯ ಮಾಡಿದ್ದು, ಬಿಜೆಪಿ ಎಂದು ಆಡಳಿತಾರೂಢ ಸದಸ್ಯರು ಆರೋಪಿಸಿದರೆ, ಕಾಂಗ್ರೆಸ್‌ ಸರಕಾರ ಕಾರಣ ಎಂದ ವಿಪಕ್ಷ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡರು.
ಒಟ್ಟಾರೆ ಗುರುವಾರದ ಕಲಾಪದ ಅರ್ಧ ಭಾಗ ಇದೇ ಗದ್ದಲದಲ್ಲಿ ಮುಳುಗಿತಲ್ಲದೆ, ವಿಧಾನಸಭೆಯಲ್ಲಿ ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ವಿಪಕ್ಷ ಸದಸ್ಯರ ಸಭಾತ್ಯಾಗದ ಮೂಲಕ ಕೊನೆಗೊಂಡರೆ, ಮೇಲ್ಮನೆಯಲ್ಲಿ ಶುಕ್ರವಾರ ಈ ವಿಚಾರ ಮತ್ತೆ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಸದನ ನಡೆಯುವಾಗ ಹೋರಾಟಗಾರ ಮೇಲೆ ಲಾಠಿ ಬೀಸುತ್ತಾರೆ ಎಂದರೆ ಪೊಲೀಸರಿಗೆ ಎಷ್ಟು ದುರಹಂಕಾರ ಇರಬೇಕು? ಅನುಭವ ಮಂಟಪದ ತೈಲವರ್ಣಚಿತ್ರ ಅನಾವರಣ ಮಾಡಿ, ಆ ಸಮುದಾಯಕ್ಕೆ ಲಾಠಿಯ ಅನುಭವ ಮಾಡಿಸಿದೆ. ದಯೆಯೇ ಧರ್ಮದ ಮೂಲ ಎಂದವರು ನಿರ್ದಯಿಯಾಗಿ ನಡೆದುಕೊಂಡಿದೆ. ಇದು ಖಂಡನೀಯ.
– ಆರ್‌. ಅಶೋಕ್‌,
ವಿಧಾನಸಭೆ ವಿಪಕ್ಷ ನಾಯಕ

ಪ್ರತಿಭಟನೆಗೆ ಪ್ರಚೋದಿಸಿದ್ದೇ ನೀವು. ಅಲ್ಪಸಂಖ್ಯಾಕರ ಪಾಲಿನ ಶೇ. 4 ಮೀಸಲಾತಿಯನ್ನು ಒಕ್ಕಲಿಗರು ಮತ್ತು ಪಂಚಮಸಾಲಿಗಳಿಗೆ ತಲಾ ಶೇ. 2ರಂತೆ ಹಂಚಿ ಅನ್ಯಾಯ ಮಾಡಿದ್ದು ನೀವು. ನ್ಯಾಯಾಲಯಗಳಲ್ಲಿ ವ್ಯತಿರಿಕ್ತ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ನೀವು.
– ವಿಜಯಾನಂದ ಕಾಶಪ್ಪನವರ್‌, ಕಾಂಗ್ರೆಸ್‌ ಶಾಸಕ

Advertisement

ಲಾಠಿಚಾರ್ಜ್‌ ಮುನ್ನ ಅಶ್ರುವಾಯು ಸಿಡಿಸಬೇಕಿತ್ತು. ಸ್ಥಳದಲ್ಲಿ ದಂಡಾಧಿಕಾರಿಗಳು ಇರಲಿಲ್ಲ. ಐಪಿಎಸ್‌ ಅಧಿಕಾರಿ ಸಮವಸ್ತ್ರದಲ್ಲಿ ಇರಲಿಲ್ಲ. ಯಾವುದೇ ನಿಯಮ ಅನುಸರಿಸದೆ ಥಳಿಸಲಾಯಿತು. ಇದರ ಬಗ್ಗೆ ಕೇಂದ್ರ ಮಾನವಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು.
– ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

ಪಂಚಮಸಾಲಿಗಳು ಶೋಷಿತರಾಗಿ¨ªಾರೆ. ಮೀಸಲಾತಿ ನೀಡಬೇಕು ಎನ್ನುವುದು ನಮ್ಮ ಒತ್ತಾಯವೂ ಆಗಿದೆ. ಆದ್ದರಿಂದ ಮೂರೂ ರಾಜಕೀಯ ಪಕ್ಷಗಳಲ್ಲಿನ ಶಾಸಕರು, ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಒಂದು ನಿರ್ಣಯಕ್ಕೆ ಬರೋಣ. ಅದನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದು ಸೂಕ್ತ.
– ಲಕ್ಷ್ಮಣ ಸವದಿ, ಕಾಂಗ್ರೆಸ್‌ ಶಾಸಕ

ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ್ದ ಸಚಿವರು ಯಾವುದೇ ಪರಿಹಾರ ವನ್ನು ಹೊತ್ತುತಂದಿದ್ದಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಬಳಿ ನಾವೇ ಹೋಗೋಣ ಅಂತ ಸ್ವಾಮೀಜಿ ನೇತೃತ್ವದಲ್ಲಿ ಹೊರಡಲು ಮುಂದಾದೆವು. ಸಮುದಾಯದ ನೋವನ್ನು ಸಿಎಂಗೆ ಮನದಟ್ಟು ಮಾಡುವುದಷ್ಟೇ ಇದರ ಉದ್ದೇಶವಾಗಿತ್ತು. ಆದರೆ ಮೀಸಲಾತಿ ಕೇಳಿದ ಸಮುದಾಯಕ್ಕೆ ಸರಕಾರ ಕೊಟ್ಟಿದ್ದು ಲಾಠಿ ಏಟು’.
– ಅರವಿಂದ ಬೆಲ್ಲದ್‌, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next