Advertisement
ಸ್ಪೀಕರ್ ಅಸಮಾಧಾನ, ಆಕ್ರೋಶ:
Related Articles
Advertisement
ಒಂದು ವಿಚಾರವನ್ನು ಒಪ್ಪುವುದು, ಬಿಡುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣದ ಒಂದು ಭಾಗವಾಗಿದೆ. ಆಡಳಿತಾರೂಢ ಹಾಗೂ ವಿಪಕ್ಷ ಸಂಸದರು ಒಟ್ಟಾಗಿ ಕುಳಿತು ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಬಿರ್ಲಾ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಪಕ್ಷ ಸಂಸದರು, ಸೊರೊಸ್ ಮತ್ತು ಸೋನಿಯಾ ಗಾಂಧಿ ವಿರುದ್ಧದ ಬಿಜೆಪಿ ಆರೋಪದ ಬಗ್ಗೆ ಚರ್ಚೆ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿದರು. ಆದರೆ ಸ್ಪೀಕರ್ ಬಿರ್ಲಾ ಅವರು ಪ್ರಶ್ನೋತ್ತರ ವೇಳೆ ಆರಂಭಿಸಲು ನಿರಾಕರಿಸಿದರು. ದಯವಿಟ್ಟು ಸುಗಮ ಕಲಾಪ ನಡೆಸಲು ಅವಕಾಶ ನೀಡಿ ಎಂದು ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿಕೊಂಡರು.
ರಾಜ್ಯಸಭೆಯಲ್ಲೂ ವಿಪಕ್ಷ ಸದಸ್ಯರು ಸೊರೊಸ್, ಸೋನಿಯಾ ಗಾಂಧಿ, ಅದಾನಿ ವಿಷಯ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ ತೀವ್ರ ಕೋಲಾಹಲದಿಂದಾಗಿ ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಅದೇ ರೀತಿ ಲೋಕಸಭೆಯ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಬುಧವಾರಕ್ಕೆ ಮುಂದೂಡಿದರು.