Advertisement
ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದರೂ ನಿರ್ವಹಣೆಯಿಲ್ಲದೆ ಹೂಳು ತುಂಬಿವೆ. ಕೆಲವೆಡೆ ಮರಳು, ಮಣ್ಣಿಗಾಗಿ ಕೆರೆಯ ಒಡಲನ್ನು ಅಗೆಯುವುದು, ಒತ್ತುವರಿ ಮೊದಲಾದ ಕಾರಣಗಳಿಂದ ಇಡೀ ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆಗಳು ಹನಿ ನೀರಿಲ್ಲದೆ ಬತ್ತಿ ಹೋಗಿವೆ. ಹನಿ ನೀರಿಗಾಗಿ ಪರದಾಡುತ್ತಿರುವ ರೈತರು, ಮಹಿಳೆಯರ ಸಂಕಷ್ಟ ಗಮನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದ್ದಾರೆ.
Related Articles
ಹೂಳು ತುಂಬಿ ಸ್ವರೂಪವನ್ನೇ ಕಳಕೊಂಡಿದ್ದ ನಾಡಪ್ರಭು ಕೆಂಪೇಗೌಡರು ರಾಮನಗರದ ಸಾವನದುರ್ಗ ಕೋಟೆಯಲ್ಲಿ ಯುದೊœàಪಕರಣಗಳನ್ನು ತಯಾರಿಸುತ್ತಿದ್ದ ಸೈನಿಕರಿಗಾಗಿ ನಿರ್ಮಿಸಿದ ಮೇಲೆಹಳ್ಳಿ ಕೆರೆ, ಕೆಳದಿ ಚೆನ್ನಮ್ಮನ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದ ಹೊಸನಗರ ತಾಲೂಕಿನ ಒಟ್ಟೂರು ಕೆರೆಗಳು ಪುನಶ್ಚೇತನಗೊಂಡಿವೆ. ಸಂಡೂರು ಮಹಾರಾಣಿಗಾಗಿ ನಿರ್ಮಾಣವಾಗಿದ್ದ ಬೊಮ್ಮನಹಳ್ಳಿ ಕೆರೆ, ಮಕ್ಕಳಿಲ್ಲದ ಮಲ್ಲಕ್ಕ ಊರಿಗೆ ಕೊಡುಗೆಯಾಗಿ ನಿರ್ಮಿಸಿದ ಕಿತ್ತೂರು ಮಲ್ಲಕ್ಕನಕೆರೆ ಮೊದಲಾದ ಕೆರೆಗಳು ಜಲಸಂಗ್ರಹಕ್ಕೆ ಅಣಿಯಾಗಿವೆ.
Advertisement
ಪುನಶ್ಚೇತನಗೊಂಡ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಕೆರೆ ಸಮಿತಿ ಹಾಗೂ ಗ್ರಾ.ಪಂ.ಗಳಿಗೆ ವಹಿಸಲಾಗುತ್ತಿದೆ. ಪ್ರದೇಶವಾರು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಕೆರೆಯ ಸುತ್ತ ನೆಡಲಾಗುವುದು. ಕಾಮಗಾರಿ ಸಂದರ್ಭ ಸ್ವಾಮೀಜಿಗಳು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಡಾ| ಮಂಜುನಾಥ್ ತಿಳಿಸಿದ್ದಾರೆ.
ಇದುವರೆಗಿನ ಸಾಧನೆ-ಪುನಶ್ಚೇತನಗೊಂಡ ಒಟ್ಟು ಕೆರೆಗಳು: 452
-ತೆಗೆದ ಹೂಳಿನ ಪ್ರಮಾಣ(ಕ್ಯೂ.ಮೀ): 11.86 ಕೋಟಿ
-ಹೆಚ್ಚಳವಾಗಿರುವ ನೀರಿನ ಸಂಗ್ರಹ ಸಾಮರ್ಥ್ಯ: 887.83 ಕೋಟಿ ಗ್ಯಾಲನ್
-ಪ್ರಯೋಜನ ಪಡೆಯುವ ಕೃಷಿಭೂಮಿ: 1.14 ಲಕ್ಷ ಎಕರೆ
-ಪ್ರಯೋಜನ ಪಡೆದ ಕುಟುಂಬಗಳು: 2.03 ಲಕ್ಷ
-ಸಂಸ್ಥೆಯಿಂದ ನೀಡಿದ ಅನುದಾನ:30.58 ಕೋ.ರೂ.
-ಸ್ಥಳೀಯರ ಪಾಲು (ಹೂಳು ಸಾಗಾಟ): 33.29 ಕೋ.ರೂ.