Advertisement
ಉಪ್ಪುಂದ ಗ್ರಾ.ಪಂ. ವ್ಯಾಪ್ತಿಯ 4ನೇ ವಾರ್ಡ್ನಲ್ಲಿ ಇರುವ ಚೌಂಡಿ ಕೆರೆಗೆ ಕಾಯಕಲ್ಪ ನೀಡಿದವರು ಫಿಶರೀಸ್ ಕಾಲನಿಯ ಆಸರೆ ಬಳಗದ ಅಧ್ಯಕ್ಷ ಜಯರಾಮ ಖಾರ್ವಿ ಹಾಗೂ ಯುವಕ ತಂಡ.
– ಕೆರೆಗೆ ಹೊಸ ಸ್ಪರ್ಶ ನೀಡಬೇಕು ಎನ್ನುವ ಆಲೋಚನೆ ಇದ್ದರೂ ಅದು ಅಷ್ಟು ಸುಲಭವಾಗಿರಲಿಲ್ಲ.
– ಅದೆಷ್ಟೋ ವರ್ಷಗಳಿಂದ ತುಂಬಿದ ಹೂಳು, ಒಡೆದುಹೋದ ಕೆರೆಯ ದಂಡೆ, ಸುತ್ತಲೂ ಬೆಳೆದ ಗಿಡ ಗಂಟಿಗಳನ್ನು ಸ್ವತ್ಛಗೊಳಿಸುವುದೇ ಸಾಹಸವಾಗಿತ್ತು.
– ಸಮುದ್ರ ವ್ಯಾಪ್ತಿಯ ಪ್ರದೇಶವಾಗಿರುವುದರಿಂದ ಭರತ-ಇಳಿತದ ವೇಳೆ ನುಗ್ಗುತ್ತಿದ್ದ ಉಪ್ಪು ನೀರನ್ನು ತಡೆಯಲು ತಡೆಗೋಡೆ ಗಟ್ಟಿಗೊಳಿಸಬೇಕಿತ್ತು.
– ತಡೆಗೋಡೆಗೆ ಸಾಕಷ್ಟು ಮಣ್ಣಿನ ಆವಶ್ಯಕತೆ ಇದಾಗ ನಾಗಪ್ಪ ಗಾಣಿಗ ಅವರು ಸೇವಾ ರೂಪದಲ್ಲಿ ಮಣ್ಣು ನೀಡಿದರು.
– ನಿರಂತರ ಪ್ರಯತ್ನದ ಮೂಲಕ ಹಲವು ದಿನಗಳ ಶ್ರಮದಾನದ ಮೂಲಕ ಕೆರೆಗೆ ಕಾಯಕಲ್ಪ ನೀಡಲಾಗಿದೆ.
Related Articles
ಈ ಕೆರೆಯನ್ನು ಸಂರಕ್ಷಣೆ ಮಾಡಿದರೆ ಈ ಭಾಗದಲ್ಲಿನ ಬಾವಿಗಳಲ್ಲಿನ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಸುತ್ತಲು ಕಲ್ಲಿನ ತಡಗೋಡೆ ನಿರ್ಮಾಣ, ವಿದ್ಯುತ್ ದೀಪದ ವ್ಯವಸ್ಥೆ, ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಅವಕಾಶವಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದರೆ ಸಹಾಯಕ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು.
– ಜಯರಾಮ ಖಾರ್ವಿ ಉಪ್ಪುಂದ, ಆಸರೆ ಬಳಗದ ಅಧ್ಯಕ್ಷ
Advertisement
ಪಾಳುಬಿದ್ದಿದ್ದ ಕೆರೆ ಈಗ ಹೇಗಿದೆ?– ಕೆರೆಗೆ ಬರುತ್ತಿದ್ದ ಉಪ್ಪು ನೀರನ್ನು ತಡೆಗಟ್ಟಿದ್ದರಿಂದ ಸಿಹಿ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಪರಿಸರದ ಬಾವಿಗಳ ನೀರಿನ ಮಟ್ಟ ಹೆಚ್ಚಲಿದೆ.
– ಕೆರೆಯ ಹೂಳುಗಳನ್ನು ತೆಗೆದು ದಂಡೆಗೆ ಬಳಸಿ ಕೊಂಡ ಪರಿಣಾಮ ಕೆರೆಯ ಗಾತ್ರ ಹೆಚ್ಚಿದೆ.
– ಸಿಹಿ ನೀರಿನ ಸಂಗ್ರಹವಾಗಿದ್ದರಿಂದ ಕೃಷಿಕರು ನೀರನ್ನು ತೋಟಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮುಂದೇನು ಆಗಬೇಕು?
– ಕೆರೆಯ ದಂಡೆಯನ್ನು ಇನ್ನಷ್ಟು ವಿಸ್ತರಿಸಿದರೆ ನೀರಿನ ಸಂಗ್ರಹ ಹೆಚ್ಚಲಿದ್ದು, ಕೃಷಿ ಬಳಕೆಗೆ ಸಹಾಯಕ.
– ಭರತದ ವೇಳೆ ತಡೆಗಳು ಒಡೆದು ಹೋಗಿ ಉಪ್ಪು ನೀರು ನುಗ್ಗುತ್ತದೆ. ಶಾಶ್ವತ ತಡೆಗೋಡೆ ಬೇಕಾಗಿದೆ. ಕೃಷ್ಣ ಬಿಜೂರು