Advertisement

Ayodhya’s Shri Ram Mandir: ಅಯೋಧ್ಯೆ ರಾಮಮಂದಿರ ಯೋಜನೆಗೆ ಸ್ವೋ ರ್ಡ್‌ ಆಫ್ ಆನರ್‌ ಕಿರೀಟ

11:37 AM Dec 16, 2024 | Team Udayavani |

ಲಕ್ನೋ: ಅಯೋಧ್ಯೆ ರಾಮಮಂದಿರ ನಿರ್ಮಾಣ ಯೋಜನೆಗೆ ಪ್ರತಿಷ್ಠಿತ ” ಸ್ವೋರ್ಡ್‌ ಆಫ್ ಆನರ್‌’ ಪ್ರಶಸ್ತಿ ಲಭಿಸಿದೆ. ಲಂಡನ್‌ ಮೂಲದ ಸಂಸ್ಥೆ ಬ್ರಿಟಿಷ್‌ ಸೇಫ್ಟಿ ಕೌನ್ಸಿಲ್‌ ಅತ್ಯುತ್ತಮ ಸುರಕ್ಷ ನಿರ್ವಹಣೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಿದೆ.

Advertisement

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಿರ್ಮಾಣ ಪ್ರಕ್ರಿಯೆ, ಕಾರ್ಯ ಚಟುವಟಿಕೆ ಹಾಗೂ ಸ್ಥಳ ಪರಿಶೀಲನೆ ಸೇರಿ ವಿವಿಧ ಹಂತಗಳ ಪರಿಶೀಲನೆಯನ್ನು ಕೌನ್ಸಿಲ್‌ ನಡೆಸಿದ್ದು, 5 ಹಂತಗಳಲ್ಲಿ ಯೋಜನೆ ಉತ್ತೀರ್ಣವಾಗಿದೆ.

ಲಾರ್ಸೆನ್‌ ಆಂಡ್‌ ಟರ್ಬೊ ಕಂಪನಿ ದೇವಾಲಯ ನಿರ್ಮಾಣ ಹೊಣೆ ಹೊತ್ತಿತ್ತು. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಗೊಂಡ ಸುರಕ್ಷಾ ಕ್ರಮದ ಹಿನ್ನೆಲೆಯಲ್ಲಿ ಎಲ್‌ & ಟಿ ಸಂಸ್ಥೆಗೂ ನ್ಯಾಷನಲ್‌ ಸೇಫ್ಟಿ ಕೌನ್ಸಿಲ್‌ ಗೋಲ್ಡನ್‌ ಟ್ರೋಫಿ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಪ್ರಕಟನೆ ತಿಳಿಸಿದೆ.

ಶ್ರೀ ರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮೇಲ್ವಿಚಾರಣೆಯಲ್ಲಿ ನಡೆದ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ತಂಡ ಮತ್ತು ಎಲ್‌ & ಟಿ ನಿಕಟ ಸಹಕಾರದ ಮೂಲಕ ರಾಮ ಮಂದಿರ ನಿರ್ಮಾಣಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next