Advertisement

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

01:22 PM Dec 25, 2024 | Team Udayavani |

ಚಿಕ್ಕಮಗಳೂರು: ಕಾನೂನಾತ್ಮಾಕ ಹಾಗೂ ರಾಜಕೀಯವಾಗಿ ಪ್ರಕರಣ ಮುಗಿದ ಮೇಲೆ ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಧರ್ಮಸ್ಥಳ ಆಣೆ ಪ್ರಮಾಣ ಆಹ್ವಾನಕ್ಕೆ ತಿರುಗೇಟು ನೀಡಿದರು.

Advertisement

ಡಿ.25ರ ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನನ್ನನ್ನು ಇಡೀ ಜಿಲ್ಲೆ ಸುತ್ತಿಸ್ಸುತ್ತಿರುವಾಗ ಯಲ್ಲಮ್ಮ ದೇವಸ್ಥಾನದ ಮುಂದೇ ಕರೆದೊಯ್ದಿದ್ದಾರೆ.  ಆಗ ಯಲ್ಲಮ್ಮನ ದೇವಿಯಲ್ಲಿ ಹರಕೆ ಕಟ್ಟಿಕೊಂಡಿದ್ದೇನೆ. ಪ್ರಕರಣ ಮುಗಿದ ಮೇಲೆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಹರಕೆ ತೀರಿಸುತ್ತೇನೆ, ಧರ್ಮಸ್ಥಳಕ್ಕೂ ಹೋಗುತ್ತೇನೆ ಎಂದು ಹೇಳಿದರು.

ಹರಕೆ ಏನು ಕಟ್ಟಿಕೊಂಡಿದ್ದೇನೆ ಎಂದು ಈಗ ಹೇಳಲ್ಲ, ಹರಕೆ ತಿರಿಸಿದ ಮೇಲೆ ಹೇಳುತ್ತೇನೆ ಎಂದರು.

ಖಾನಾಪುರ ಪಿ.ಎಸ್.ಐ. ಮಂಜುನಾಥ ಅಮಾನತು ಮಾಡಿರುವ ವಿಚಾರ ತಿಳಿದಿಲ್ಲ. ಪಿ.ಎಸ್.ಐ. ಅಮಾನತು ಮಾಡುವುದಲ್ಲ ಎಂದ ಅವರು, ಕಮಿಷನರ್, ಎಸ್.ಪಿ. ಹಾಗೂ ಪ್ರಕರಣಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಆಗಬೇಕು. ನಾನು ನೀಡಿದ  ಕಂಪ್ಲೆಂಟ್‌ ರಿಜಿಸ್ಟರ್ ಆಗಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next