Advertisement
ಸಚಿವ ಪ್ರಿಯಾಂಕ್ ಖರ್ಗೆ ಮಸೂದೆ ಯನ್ನು ಮಂಡಿಸುತ್ತಿದ್ದಂತೆ ಬಿಜೆಪಿಯ ಶಾಸಕ ಡಾ| ಅಶ್ವತ್ಥನಾರಾಯಣ ಅದಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿದರು. ರಾಜ್ಯಪಾಲರ ವಿರುದ್ಧ ಜಿದ್ದಿಗೆ ಬಿದ್ದು, ಅವರ ಅಧಿಕಾರವನ್ನು ಮೊಟಕುಗೊಳಿಸುವ ಸಾಹಸಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈ ಮಸೂದೆ ಹಗೆತನ ಮತ್ತು ದ್ವೇಷಕ್ಕೆ ಮಾತ್ರ ಸೀಮಿತವಾಗಿದೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹಿಂದಕ್ಕೆ ಒಯ್ಯುವ ಪ್ರಯತ್ನ ಎಂದು ಟೀಕಿಸಿದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ, ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆ ಅಲಂಕರಿಸಿದ್ದು, ಹೆಚ್ಚಿನ ಸಂದರ್ಭದಲ್ಲಿ ಸಮಯಾವಕಾಶ ಹೊಂದಿರುವುದಿಲ್ಲ. ಹೀಗಾಗಿ ಕುಲಾಧಿಪತಿ ಹುದ್ದೆಯನ್ನು ಮುಖ್ಯಮಂತ್ರಿ ಅಲಂಕರಿಸಿದರೆ ಆಡಳಿತಾತ್ಮಕ ಪ್ರಕ್ರಿಯೆ ಸುಲಭವಾಗುತ್ತದೆ. ಗುಜರಾತ್ನಲ್ಲಿ ಎಲ್ಲ ವಿ.ವಿ.ಗಳ ಕುಲಪತಿ ಹುದ್ದೆಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.
Related Articles
Advertisement
ರಾಜಭವನದ ಬಗ್ಗೆ ಚರ್ಚೆಈ ಹಂತದಲ್ಲಿ ಚರ್ಚೆ ರಾಜಭವನದ ದುರ್ಬಳಕೆಯ ಕಡೆಗೆ ಹೊರಳಿತು. ಈ ದೇಶದಲ್ಲಿ ಯಾವ ರಾಜ್ಯದ ರಾಜ್ಯಪಾಲರು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ? ಎಲ್ಲರೂ ಸರಿಯಾಗಿದ್ದರೆ ಈ ಮಸೂದೆ ತರುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎಂದು ಮಾಗಡಿ ಬಾಲಕೃಷ್ಣ ತಿರುಗೇಟು ಕೊಟ್ಟರೆ, ಈ ಹಿಂದೆ ಹಂಸರಾಜ್ ಭಾರದ್ವಾಜ್ ಅವರು ರಾಜಭವನವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಯತ್ನಾಳ್ ಕಾಲೆಳೆದರು. ಹೆಸರು ಬದಲಾವಣೆ
ಮಸೂದೆಯ ಪರವಾಗಿ ಮಾತನಾಡಿದ ಶಾಸಕ ಬಿ.ಆರ್. ಪಾಟೀಲ್, ಈ ಮಸೂದೆಯ ಉದ್ದೇಶ ಸರಿಯಾಗಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸ್ಮರಣಾರ್ಥವಾಗಿ ಈ ವಿಶ್ವವಿದ್ಯಾನಿಲಯಕ್ಕೆ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿ.ವಿ. ಎಂದು ಹೆಸರಿಡು
ವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳ
ಲಾಗುವುದು ಎಂದು ಭರವಸೆ ನೀಡಿದರು. ರಾಜ್ಯಪಾಲರು ಕುಲಾಧಿಪತಿ ಯಾಗಿರ ಬಾರದು ಎಂದೂ ಯಾವ ಕಾಯಿದೆಯಲ್ಲೂ ಹೇಳಿಲ್ಲ. ಎಲ್ಲ ಬಾಲ್ಗೂ ಸಿಕ್ಸ್ ಹೊಡೆಯಲು ಹೋದರೆ ವಿಕೆಟ್ ಉದುರಿ ಹೋಗುತ್ತದೆ. – ಡಾ.ಅಶ್ವತ್ಥನಾರಾಯಣ, ಶಾಸಕ ರಾಜ್ಯಪಾಲರು ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿಲ್ಲ. ರಾಜ್ಯಪಾಲರೇ ವಿ.ವಿ. ಕುಲಾಧಿಪತಿಗಳಾಗಿರಬೇಕೆಂದು ಯಾವ ಕಾಯಿದೆಯಲ್ಲೂ ಕಡ್ಡಾಯವಾಗಿ ಹೇಳಿಲ್ಲ. ಬಿಜೆಪಿಯವರ ಬೌಲಿಂಗ್ಗೆ ಸಿಕ್ಸರ್ ಹೊಡೆದರೆ ಮಾತ್ರ ಮಜಾ ಬರುತ್ತದೆ. ಹೀಗಾಗಿ ಮಾತಿಗೆ ಮಾತಿನ ಏಟು ನೀಡುತ್ತಿದ್ದೇನೆ.
- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಮಸೂದೆಯಲ್ಲಿ ಏನಿದೆ?
– ಇನ್ನು ಮುಂದೆ ಸಿಎಂ ಪಂಚಾಯತ್ ರಾಜ್ ವಿ.ವಿ. ಕುಲಾಧಿಪತಿ. – ಶೋಧನ ಸಮಿತಿ ಶಿಫಾರಸು ಮಾಡಿದ ಮೂವರು ವ್ಯಕ್ತಿಗಳ ಪೈಕಿ ಒಬ್ಬರನ್ನು ಕುಲಪತಿಯಾಗಿ ನೇಮಿಸುವ ಅಧಿಕಾರ ಇನ್ನು ಮುಂದೆ ಮುಖ್ಯಮಂತ್ರಿಗೆ. – ಕುಲಪತಿ ನೇಮಕಕ್ಕೆ ಅರ್ಹತೆ ಆಧಾರದ ಮೇಲೆ ಶೋಧನ ಸಮಿತಿಯನ್ನು ಸರಕಾರವೇ ರಚಿಸುತ್ತದೆ. ಈ ವಿಶ್ವವಿದ್ಯಾನಿಲಯದಲ್ಲಿ ಇನ್ನು ಮುಂದೆ 15 ಕ್ಷೇತ್ರೀಯ ವಿಚಾರಗಳು ಒಳಗೊಂಡಿರುತ್ತವೆ.