Advertisement
ಅಂಧೇರಿ ಪಶ್ಚಿಮದ ವೀರ ದೇಸಾಯಿ ರೋಡ್‌ನ, ಎಂವಿಎಂ ಎಜುಕೇಶನಲ್ ಕ್ಯಾಂಪಸ್ ಮಾರ್ಗದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಫೆ. 24 ರಂದು ಸಂಜೆ 6 ರಿಂದ ದೇವರ ಮೂರ್ತಿಯನ್ನು ಮಂಟಪದಲ್ಲಿ ಆರೂಢಗೊಳಿಸಲಾಯಿತು. ಆನಂತರ ಹೋಮ, ಬ್ರಾಹ್ಮಣ ಸತ್ಕಾರ, ಗ್ರಂಥ ಪಾರಾಯಣ, ಉಪಕಾರ ಸ್ಮರಣೆ, ಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಫೆ. 25 ರಂದು ಪ್ರಾತಃಕಾಲ 8ರಿಂದ ಭಜನೆ, ಉತ್ತರ ಪೂಜೆ, ಮಹಾಮಂಗಳಾರತಿ, ಪೂರ್ವಾಹ್ನ 11.30ರಿಂದ ಪ್ರಾರ್ಥನೆ, ಹರಕೆ ಸಮರ್ಪಣೆ, ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿತ್ತು.
Related Articles
Advertisement
ಮೊಗವೀನ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ. ಎಲ್. ಬಂಗೇರ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಶ್ರೀ ಮಹಾಲಕ್ಷ್ಮೀ ಹೌಸಿಂಗ್ ಸೊಸೈಟಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಕರ್ಕೇರ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಮುಂಬಯಿಇದರ ನಾರಾಯಣ ತಿಂಗಳಾಯ, ಉದ್ಯಮಿ ಶ್ರೀನಿವಾಸ ಕಾಂಚನ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಗುಂಡಿ ವಿ. ಕೆ. ಸುವರ್ಣ ಇವರು ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಮತ್ತು ಸದಸ್ಯರು ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ಮಂಡಳದ ಉಪಾಧ್ಯಕ್ಷರುಗಳಾದ ಒಡೆಯರಬೆಟ್ಟು ರಘುನಾಥ್ ಬಿ. ಕುಂದರ್ ಮತ್ತು ಬಂಟ್ವಾಡಿ ಸಂಜೀವ ಬಿ. ಚಂದನ್, ಗೌರವ ಜತೆ ಕಾರ್ಯದರ್ಶಿಗಳಾದ ಸಣ್ಣಗುಂಡಿ ಲೋಕನಾಥ್ ಪಿ. ಕಾಂಚನ್ ಮತ್ತು ಪಲಿಮಾರು ಹರಿಶ್ಚಂದ್ರ ಸಿ. ಕಾಂಚನ್, ಗೌರವ ಕೋಶಾಧಿಕಾರಿ ಮೂಳೂರು ಕೇಶವ ಆರ್. ಪುತ್ರನ್, ಜತೆ ಕೋಶಾಧಿಕಾರಿಗಳಾದ ಮೂಳೂರು ನಾರಾಯಣ ಸಿ. ಸುವರ್ಣ ಮತ್ತು ಬೈಕಂಪಾಡಿ ಶ್ಯಾಮ ಕೆ. ಪುತ್ರನ್, ಅಶೋಕ್ ಎನ್. ಸುವರ್ಣ ಇವರು ಉಪಸ್ಥಿತರಿದ್ದರು.
ಪಾರುಪತ್ಯಗಾರರುಗಳಾದ ಜೆ. ಪಿ. ಪುತ್ರನ್, ವಿ. ಕೆ. ಸುವರ್ಣ, ನಾರಾಯಣ ಸಿ. ಸುವರ್ಣ, ಆನಂದ ಎ. ಅಮೀನ್, ನಾಗೇಶ್ ಎಲ್. ಮೆಂಡನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶಶಿಕುಮಾರ್ ಎಸ್. ಕೋಟ್ಯಾನ್, ಲೋಕನಾಥ್ ಒ. ಡಿ. ಮೆಂಡನ್, ವಾಸು ಎಸ್. ಉಪ್ಪೂರು, ದೇವದಾಸ್ ಪಿ. ಕರ್ಕೇರ, ಗೋವಿಂದ ಎನ್. ಪುತ್ರನ್, ಗಂಗಾಧರ ಎಸ್. ಕರ್ಕೇರ, ಎಚ್. ಮಹಾಬಲ್, ಸುರೇಂದ್ರನಾಥ್ ಹಳೆಯಂಗಡಿ, ಆನಂದ ಎ. ಅಮೀನ್, ಗಂಗಾಧರ ಪಿ. ಸಾಲ್ಯಾನ್ ಹಾಗೂ ಇತರ ಸೇವಾಕರ್ತರುಗಳಾದ ಹೊಸಬೆಟ್ಟು ಮಹಾಬಲ ಮತ್ತು ಅಳಿಕೆ ಪುರಂದರ ಅಮೀನ್ ಇವರು ಉಪಸ್ಥಿತರಿದ್ದರು.
ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಇವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆಯಿತು. ಮಧ್ಯಾಹ್ನ 12.05 ರಿಂದ ಅಪರಾಹ್ನ 2 ರವರೆಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ 3 ರಿಂದ ದೇವರ ಶ್ರೀ ದೇವರ ಮೂರ್ತಿಯೊಂದಿಗೆ ವಸೋìವಾ ಚೌಪಾಟಿಗೆ ಅವಭೃತ ಸ್ನಾನಕ್ಕೆ ತೆರಳಲಾಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು, ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಶ್ ಶಿರಿಯಾ