Advertisement

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

12:13 AM Jan 07, 2025 | Team Udayavani |

ಹೊಸದಿಲ್ಲಿ: ವಕ್ಫ್ ಮಂಡಳಿಗೆ ಸೇರಿದ 18 ಎಕ್ರೆ ಭೂಮಿಯನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅಖೀಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಬುದ್ದೀನ್‌ ರಾಜ್ವಿ ಬರೆಲ್ವಿ ದೂರಿದ್ದಾರೆ.

Advertisement

ವಕ್ಫ್ ಮಂಡಳಿ ಜಮೀನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ಮುಸ್ಲಿಮರು ಈ ಕುಂಭಮೇಳದಲ್ಲಿ ಭಾಗಿಯಾಗಲು ಹಿಂದೂಗಳು ಅವಕಾಶ ನೀಡಬೇಕು. ಕಾರ್ಯಕ್ರಮದಲ್ಲಿ ಹಿಂದೂಯೇತರರು ಭಾಗಿಯಾಗಬಾರದೆಂದು ಹೇಳಿದ್ದ ಅಖೀಲ ಭಾರತ ಅಖಾಡ ಪರಿಷದ್‌ ಕ್ರಮವನ್ನು ರಾಜ್ವಿ ಟೀಕಿಸಿದ್ದಾರೆ. ರವಿವಾರ ಅವರು ಕುಂಭಮೇಳದಲ್ಲಿ ಮುಸ್ಲಿಮರನ್ನು ಸಾಮೂಹಿಕವಾಗಿ ಮತಾಂತರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದರು.

ಹೇಳಿಕೆಗೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, “ಇಸ್ಲಾಂ ಹುಟ್ಟುವುದಕ್ಕೂ ಮೊದಲೇ ಕುಂಭಮೇಳ ನಡೆಯುತ್ತಿದೆ. ಹಿಂದೂಗಳನ್ನು ಪ್ರಚೋದಿಸಲು ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next