ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಭಾರತದ ಪ್ರಮುಖ ಸಿಆರ್‌ಎಂ ಸಲ್ಯೂಷನ್ಸ್ ಆದ ಸೆಲ್ .ಡು ಸಿಇಒ ಸಮ್ಮೇಳನವನ್ನು ರಿಯಲ್ಟಿ+ ಮಾಸ್ಟರ್‌ಕ್ಲಾಸ್ ಜೊತೆಗೆ ಬೆಂಗಳೂರಿನಲ್ಲಿ ಆಯೋಜಿಸಿತ್ತು.
ಈ ಸಮ್ಮೇಳನದಲ್ಲಿ ಪುರವಂಕರ ಲಿಮಿಟೆಡ್‍ನ ಅಭಿಷೇಕ್ ಕಪೂರ್, ಬ್ರಿಗೇಡ್ ಗ್ರೂಪ್‍ನ ರಾಜೇಂದ್ರ ಜೋಶಿ –ಎಸ್‍ಎನ್ ಎನ್ ಬಿಲ್ಡರ್ಸ್ ನ ಶ್ರೀನಿವಾಸನ್ ಸುಬ್ರಮಣಿಯನ್, ಭಾರತೀಯ ಸಿಟಿಯ ಅಶ್ವಿಂದರ್ ಆರ್ ಸಿಂಗ್ , ಓಝೋನ್ ಗ್ರೂಪ್‍ನ ಸ್ ಭಾಸ್ಕರನ್ ಭಾಗವಹಿಸಿದ್ದರು.
‘ಬೆಂಗಳೂರು ರಿಯಾಲಿಟಿ ಪರಿವರ್ತನೆ ಮತ್ತು ಬೆಳವಣಿಗೆ, ಈ ವಲಯದಲ್ಲಿನ ಸರ್ಕಾರದ ನೀತಿಗಳು ಮತ್ತು ನಿಯಮಾವಳಿಗಳು, ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು ಮತ್ತು ಗ್ರಾಹಕರಿಗೆ ಲಭ್ಯವಿರುವ ಬ್ಯಾಂಕ್ ಸಾಲಗಳು ಮತ್ತು ನಿರ್ಮಾಣ ಹಣಕಾಸಿನಂತಹ ಹಣಕಾಸಿನ ಆಯ್ಕೆಗಳ ಪ್ರಮುಖ ಒಳನೋಟಗಳನ್ನು ಇದರಲ್ಲಿ ಚರ್ಚಿಸಲಾಯಿತು.
“ಜಾಗತಿಕ ಐಟಿ ಬೂಮ್ ಅನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ, ಇದು ವಾಸಿಸಲು ಇಚ್ಚಿಸುವವರಿಗೆ ಅನುಕೂಲಕರ ತಾಣವಾಗಿದೆ. ಅಲ್ಲದೆ, ರಾಜ್ಯ ಸರ್ಕಾರದ ನೀತಿಗಳು ಮತ್ತು ಆಕರ್ಷಕ ಹಬ್ಬದ ಬ್ಯಾಂಕ್ ಸಾಲಗಳು ಬೆಂಗಳೂರಿನಲ್ಲಿ ಮನೆ ಕೊಳ್ಳಲು ಸಹಾಯ ಮಾಡುತ್ತಿದೆ. ಬೆಂಗಳೂರಿನ ಗ್ರಾಹಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಸಹಾಯ ಅಗತ್ಯ ಎಂದು ಸೆಲ್.ಡು ಎಂ.ಡಿ. ವಿಕ್ರಮ್ ಕೋಟ್ನಿಸ್ ತಿಳಿಸಿದರು.
ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮವು ಈಗ ಉತ್ತಮ ಬೆಳವಣಿಗೆ ಹೊಂದುತ್ತಿದೆ. ತಾಂತ್ರಿಕತೆಯನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದು, ಸ್ಟಾಂಪ್ ಡ್ಯೂಟಿ ಇಳಿಕೆ, ಲಾಭದಾಯಕ ಗೃಹ ಸಾಲದ ಬಡ್ಡಿ ಇಳಿಕೆ ಮತ್ತು ಹಬ್ಬದ ಕೊಡುಗೆಗಳು ಆರ್ ಇ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಬೆಂಗಳೂರು, ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಆದ್ಯತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಮುಖ್ಯವಾಗಿ ಬಿಎಫ್‌ಎಸ್‌ಐ, ಟೆಕ್ ಮತ್ತು ಫಾರ್ಮಾ ಕಂಪನಿಗಳು ಈ ಅವಕಾಶ ಬಳಸಿಕೊಳ್ಳುತ್ತಿವೆ ಎಂದು ಪುರವಂಕರ ಲಿಮಿಟೆಡ್ ಸಿಇಒ ಅಭಿಷೇಕ್ ಕಪೂರ್ ಹೇಳಿದರು.