Advertisement
ಸರಕಾರ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ಕೋಟಿ ರೂ. ಅನುದಾನ ನೀಡಿದೆ. ಆದರೆ, ಈ ಹಣ ಗಡಿನಾಡ ಕನ್ನಡ ಮಕ್ಕಳ ಫೆಲೋಶಿಪ್ ನೀಡಲು, ನೌಕರರ ಸಂಬಳ, ಸಾರಿಗೆ ವೆಚ್ಚಕ್ಕೆ ಮಾತ್ರ ಸಾಕಾಗುತ್ತದೆ. ಹೊಸ ಯೋಜನೆಗಳಿಗೆ ಹಣವಿಲ್ಲದಂತಾಗಿದೆ. ಹೀಗಾಗಿ ಪ್ರಾಧಿಕಾರದ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೆ, ಹಣ ಬಿಡುಗಡೆಗೆ ಭರಸೆ ಇನ್ನೂ ಸಿಕಿಲ್ಲ.
ನಾಡಿನಾದ್ಯಂತ ಮದ್ರಸಾಗಳಲ್ಲಿ ಕನ್ನಡ ಕಲಿಕಾ ತರಗತಿ ನಡೆಸುವುದು ಪ್ರಾಧಿಕಾರದ ದೊಡ್ಡ ಯೋಜನೆ ಯಾಗಿದೆ. ಇದನ್ನು ಕರ್ನಾಟಕ ದಾದ್ಯಂತ ಜಾರಿ ಮಾಡುವುದಾದರೆ 400-500 ಶಿಕ್ಷಕರು ಬೇಕಾಗಲಿದ್ದು, ಸುಮಾರು 2 ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಈ ಹೊಸವರ್ಷ ದಿಂದಲೇ ಆರಂಭಿಸಬೇಕಿತ್ತು. ಅಷ್ಟು ಹಣ ಈಗ ಪ್ರಾಧಿಕಾರದಲ್ಲಿಲ್ಲ. ಕಲಬುರಗಿ ಸೇರಿ ಇತರೆಡೆ ನಡೆಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ ಎಂದು ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಬಜೆಟ್‌ನಲ್ಲಿ ಅನುದಾನ ಲಭ್ಯವಾದರೆ ಅನುಷ್ಠಾನ ಮಾಡುವ ಆಲೋಚನೆಯಲ್ಲಿ ಪ್ರಾಧಿಕಾರವಿದೆ ಎಂದಿದ್ದಾರೆ. ಹೊರ ರಾಜ್ಯದ 1200 ಜನರಿಗೆ ಕನ್ನಡ ಕಲಿಕೆ
ಬೆಂಗಳೂರಿನಲ್ಲಿ ನೆಲೆಸಿರುವ ಮಲಯಾಳಿ ಗರು ಸೇರಿ ಬ್ಯಾಂಕ್ ಉದ್ಯೋಗಿಗಳಿಗೆ ಕನ್ನಡ ಕಲಿಕೆ ತರಗತಿ ನಡೆಸಲಾಗಿದೆ. ವಿವಿಧ ಭಾಷೆಗಳ ಸುಮಾರು 1200 ಜನ ಕನ್ನಡ ಕಲಿಯುತ್ತಿದ್ದಾರೆ. ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಮಾರ್ಚ್ ಬಜೆಟ್ ಮಂಡನೆ ಒಳಗೆ 5 ಕೋಟಿ ರೂ. ನೀಡಿ ಎಂದು ಸರಕಾರಕ್ಕೆ ಪ್ರಾಧಿಕಾರ ಬೇಡಿಕೆಯಿಟ್ಟಿದೆ. ಸಿಎಂ ಸಿದ್ದರಾಮಯ್ಯ ಗಮನಕ್ಕೂ ಹಣಕಾಸಿನ ಪರಿಸ್ಥಿತಿ ತರಲಾಗಿದೆ. ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೂಡ ಭೇಟಿ ಮಾಡಲಾಗಿದೆ. ಆದರೆ, ಏನು ಮಾಡುತ್ತಾರೋ ಗೊತ್ತಿಲ್ಲ. ಕಾರ್ಯಕ್ರಮ ರೂಪಿಸಲು ನಮಗೆ ತೊಂದರೆ ಇಲ್ಲ. ಹೊಸ ಯೋಜನೆ ರೂಪಿಸಲು ಜನರೂ ಇದ್ದಾರೆ. ಆದರೆ, ಅದರ ಜಾರಿಗೆ ಬೇಕಾದ ಆರ್ಥಿಕತೆ ಇಲ್ಲದೆ ಹೋದರೆ ಏನೂ ಮಾಡಲಾಗದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ಹೇಳಿವೆ.
Advertisement
ಮದ್ರಸಾಗಳಲ್ಲಿ ಕನ್ನಡ ಕಲಿಕೆ ಸೇರಿದಂತೆ ಹಲವು ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ 30 ಕೋಟಿ ರೂ. ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸ ಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಪ್ರಾಧಿಕಾರವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಪ್ರಾಧಿಕಾರದ ಬೇಡಿಕೆಗೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ. – ಪುರೋಷೋತ್ತಮ ಬಿಳಿಮಲೆ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ
- ದೇವೇಶ ಸೂರಗುಪ್ಪ