Advertisement

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

10:51 AM Dec 29, 2024 | Team Udayavani |

ದೇವನಹಳ್ಳಿ: ಕ್ಯಾಬ್‌ ಡ್ರೈವರ್‌ ನಿದ್ದೆ ಮಾಡುತ್ತಿದ್ದನ್ನು ಗಮನಿಸಿದ ಪ್ರಯಾಣಿಕನೊಬ್ಬ ಡ್ರೈವರ್‌ ಬಳಿ ಕೀ ಪಡೆದು ತಾನೇ ಕ್ಯಾಬ್‌ ಓಡಿಸಿ ತಾನು ತಲುಪಬೇಕಿದ್ದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿರುವ ವಿಭಿನ್ನ ಘಟನೆ ನಡೆದಿದೆ.

Advertisement

ಅಲ್ಲದೇ ಚಾಲಕನ ಬಗ್ಗೆ ಅನುಕಂಪ ತೋರಿಸಿ, ಕ್ಯಾಬ್‌ನ ಆ್ಯಪ್‌ ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ನೀಡಿ.100 ರೂ. ಟಿಪ್ಸ್‌ ಸಹ ಕೊಟ್ಟು ಔದಾರ್ಯ ಮೆರೆದಿದ್ದಾರೆ.

ತಾಲೂಕಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಕ್ಯಾಬ್‌ ಒಂದರಲ್ಲಿ ಪ್ರಯಾಣಿಕ ಮಿಲಿಂದ್‌ ಚಂದ್ವಾನಿ ತೆರಳುತ್ತಿದ್ದರು. ಕ್ಯಾಬ್‌ನಲ್ಲಿ ಚಾಲಕನು ನಿದ್ರೆಗೆ ಜಾರಿತ್ತಿದ್ದನ್ನು ಗಮನಿಸಿದ ಮಿಲಿಂದ್‌ ಅವರ ತಾನೇ ಕ್ಯಾಬ್‌ ಅನ್ನು ಚಾಲನೆ ಮಾಡಿಕೊಂಡು ಮನೆಗೆ ತಲುಪಿದ್ದಾರೆ. ಶನಿವಾರ ನಸುಕಿನ 3 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿ ಕೊಂಡಿರುವ ಮಿಲಿಂದ್‌ ಚಂದ್ವಾನಿ ಎಂಬ ಐಐಎಂನ ಎಂಬಿಎ ಪದವೀಧರ, “ಜೀವನದಲ್ಲಿ ಕೆಲವೊಮ್ಮೆ ಅಸಹಜ ಕೆಲಸಗಳನ್ನು ನಾವು ಮಾಡಬೇಕಾದ ಸಂದರ್ಭಗಳು ಒದಗಿ ಬರುತ್ತದೆ’ ಎಂದು ಬರೆದುಕೊಂಡಿದ್ದಾರೆ.

ವಿಮಾನ ನಿಲ್ದಾಣದಿಂದ ಕ್ಯಾಬ್‌ ಏರಿಕೊಂಡು ಬೆಂಗಳೂರಿನೆಡೆಗೆ ಸಾಗುವಾಗ ಕ್ಯಾಬ್‌ ಚಾಲಕ ಆಗಾಗ ನಿದ್ದೆ ಮಾಡುತ್ತಿದ್ದರು. ಹೋಗುವ ದಾರಿಯಲ್ಲಿ ನಿಲ್ಲಿಸಿ ಒಂದು ಟೀಯೊಂದಿಗೆ ಸಿಗರೆಟ್‌ ಸೇದಿದರೂ ಆತನನ್ನು ನಿದ್ದೆ ಬಿಡುತ್ತಿರಲಿಲ್ಲ. ಇದರಿಂದಾಗಿ ನನಗೆ ತೊಂದರೆಗಳು ಹೆಚ್ಚಾಗಿರುವ ಕಾರಣದಿಂದಾಗಿ, ನಾನೇ ಕ್ಯಾಬ್‌ ಚಾಲನೆ ಮಾಡುತ್ತೇನೆ ಎಂದು ಕ್ಯಾಬ್‌ ಚಾಲಕನಲ್ಲಿ ಕೇಳಿದಾಕ್ಷಣ ಆತನು ದಿಢೀರ್‌ಎಂದು ಕ್ಯಾಬ್‌ನ ಕೀ ಕೊಟ್ಟು, ಗೂಗಲ್‌ ಮ್ಯಾಪ್‌ನಲ್ಲಿ ತೊರಿಸಿದ ರೀತಿ ದಾರಿಯಲ್ಲಿ ಸಾಗಿ ನಾವು ಗಮ್ಯ ಸ್ಥಾನಕ್ಕೆ ತಲುಪಿದ್ದೇನೆ’ ಎಂದು ಹೇಳಿದ್ದಾರೆ.

Advertisement

ನಂತರ ಚಾಲಕನ ಪಕ್ಕದ ಸೀಟ್‌ನ್ನು ಹಿಂದಕ್ಕೆ ಸರಿಸಿಕೊಂಡು, ನೆಮ್ಮದಿಯಿಂದ ನಿದ್ರಿಸಿದ್ದಾನೆ. ಆತನಿಗೆ ಕ್ಯಾಬ್‌ನ ಆ್ಯಪ್‌ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ನೀಡಿ.100 ರೂ. ಟಿಪ್ಸ್‌ ಕೊಟ್ಟೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next