Advertisement
ಪ್ರಾಧಿಕಾರವು ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ ಇತ್ಯಾದಿಗಳನ್ನು ಎಂದಿನಂತೆ ನಿರ್ವಹಿಸುತ್ತಿದೆ. ಇವುಗಳ ಜತೆಗೆ ಸರಕಾರದ ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಕೂಡ ನಿಭಾಯಿಸಿದೆ. ಈ ಮೂಲಕ ಕಳೆದೊಂದು ವರ್ಷದಲ್ಲಿ 20 ಲಕ್ಷಕ್ಕೂ ಅರ್ಜಿಗಳನ್ನು ನಿರ್ವಹಿಸಲಾಗಿದೆ. ಒಂದೇ ವರ್ಷದಲ್ಲಿ ಇಷ್ಟೊಂದು ಪರೀಕ್ಷೆಗಳನ್ನು ನಡೆಸಿದ್ದು ಮತ್ತು ಅದೇ ವರ್ಷದಲ್ಲೇ ಅವುಗಳ ಫಲಿತಾಂಶ ಕೂಡ ಕೊಟ್ಟಿದ್ದು ಪ್ರಾಧಿಕಾರದ ಮೂರು ವರ್ಷಗಳ ಇತಿಹಾಸದಲ್ಲಿ ದಾಖಲೆ ಎಂದು ತಿಳಿಸಿದ್ದಾರೆ.
ಲಾಯಿತು. ಪರೀಕ್ಷಾ ಕೊಠಡಿಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಟ್ಟು ಕೆಇಎ ಕಚೇರಿಯಲ್ಲಿ ಕುಳಿತು ಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸಲಾಯಿತು. 2024ರಲ್ಲಿ ಅಧಿಸೂಚನೆ ಹೊರಡಿಸಿದ್ದಲ್ಲದೆ, 2022 ಮತ್ತು 2023ರಲ್ಲಿ ಅಧಿಸೂಚನೆ ಹೊರಡಿಸಿದ್ದ ಪರೀಕ್ಷೆಗಳನ್ನೂ ಈ ವರ್ಷದಲ್ಲಿ ಪೂರ್ಣಗೊಳಿಸಿದ ತೃಪ್ತಿ ಇದೆ ಎಂದು ವಿವರಿಸಿದ್ದಾರೆ. ಉಚಿತ ತರಬೇತಿ
2024ನೇ ಸಾಲಿನ ಸಿಇಟಿ ಪರೀಕ್ಷೆ, ಸೀಟು ಹಂಚಿಕೆ ಇತ್ಯಾದಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸಂಬಂಧ ಪ್ರಕ್ರಿಯೆಗಳಲ್ಲದೆ, ಇಷ್ಟೊಂದು ನೇಮಕಾತಿ ಪರೀಕ್ಷೆ ನಡೆಸಿದ್ದು ಕೆಇಎ ಇತಿಹಾಸದಲ್ಲಿ ಇದೇ ಮೊದಲು. ವಸತಿ ಶಾಲೆಗಳ ಪ್ರವೇಶಕ್ಕೂ ಕೆಇಎ ಪರೀಕ್ಷೆ ನಡೆಸಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಐಎಎಸ್/ಕೆಎಎಸ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡುತ್ತಿದೆ. ಇದಕ್ಕೆ ಆಸಕ್ತ ಮತ್ತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೂಡ ಕೆಇಎ ಪರೀಕ್ಷೆ ನಡೆಸಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.