Advertisement

ಗಿರಿಕಥೆ ಚಿತ್ರಕ್ಕೆ ನಾಯಕಿಯ ಹುಡುಕಾಟ

04:08 AM Jun 30, 2020 | Lakshmi GovindaRaj |

ನಟ ರಿಷಭ್‌ ಹರಿಕಥೆ ಅಲ್ಲ, ಗಿರಿಕಥೆ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ವಿಚಾರ ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತ ನಡೆದಿದೆ. ಸರಳವಾಗಿ ನಡೆದ ಮುಹೂರ್ತದಲ್ಲಿ ಚಿತ್ರತಂಡವಷ್ಟೇ ಭಾಗಿಯಾಗಿತ್ತು. ಈಗ  ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ. ಪಾತ್ರಕ್ಕೆ ಹೊಂದಿಕೆಯಾ ಗುವ ನಾಯಕಿಯನ್ನು ತಲಾಶ್‌ ನಲ್ಲಿರುವ ಚಿತ್ರತಂಡ, ವಿಡಿಯೋ ಮಾಡಿ ಕಳುಹಿಸುವ ಮೂಲಕ ಆಡಿಷನ್‌ನಲ್ಲಿ ಭಾಗಿಯಾಗುವಂತೆ ಸೂಚಿಸಿದೆ.

Advertisement

ಸಂದೇಶ್‌  ಪೊ›ಡಕ್ಷನ್ಸ್‌ ಅವರು ರಿಷಬ್‌ ಶೆಟ್ಟಿ ಫಿಲಂಸ್‌ ಸಹಭಾಗಿತ್ವದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡಿದ್ದ, ಗಿರಿಕೃಷ್ಣ ಈ ಚಿತ್ರದ ನಿರ್ದೇಶಕರು. ಮೂಲತಃ ನಟರಾಗಿದ್ದ ಇವರಿಗೆ ಇದು  ಚೊಚ್ಚಲ ನಿರ್ದೇಶನದ ಚಿತ್ರ. “ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಗಿರಿಕೃಷ್ಣ ಅವರು ನಟಿಸಿದ್ದು, ರಿಷಬ್‌ ಶೆಟ್ಟಿ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದು, ಗಿರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

“ಕಿರಿಕ್‌ ಪಾರ್ಟಿ’  ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಸುಮಧುರ ಸಂಗೀತ ನೀಡಿರುವ ಅಜನೀಶ್‌ ಲೋಕನಾಥ್‌ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. “ಕಥಾ ಸಂಗಮ’ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ರಂಗನಾಥ್‌ ಸಿ.ಎಂ ಈ ಚಿತ್ರದ  ಛಾಯಾಗ್ರಾಹಕರು. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next