Advertisement

ಉಗ್ರ ಪ್ರವರ್ತನೆ : ಕತಾರ್‌ ಜತೆ ಸೌದಿ, ಬಹರೈನ್‌, ಯುಎಇ ಸಂಬಂಧ ಕಡಿತ

10:44 AM Jun 05, 2017 | Team Udayavani |

ಕೈರೋ : ಕತಾರ್‌ ದೇಶ ಭಯೋತ್ಪಾದನೆಯನ್ನು ಪ್ರವರ್ತಿಸುತ್ತಿರುವ ಕಾರಣಕ್ಕೆ ತಾವು ಆ ದೇಶದೊಂದಿಗಿನ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಸೌದಿ ಅರೇಬಿಯ, ಈಜಿಪ್ಟ್ , ಬಹರೇನ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌  ಪ್ರಕಟಿಸಿವೆ. 

Advertisement

2022ರಲ್ಲಿ ವಿಶ್ವ ಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯನ್ನು ನಡೆಸಿಕೊಡಲಿರುವ ಕತಾರ್‌, ಇಸ್ಲಾಮಿಕ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕ ನೇತೃತ್ವದ ಮಿತ್ರಕೂಟದ ಓರ್ವ ಸದಸ್ಯ ದೇಶವಾಗಿದೆ. ಈಚಿನ ವರ್ಷಗಳಲ್ಲಿ ಕತಾರ್‌ ಇಸ್ಲಾಮಿಕ್‌ ಉಗ್ರರಿಗೆ ಹಣ ಇತ್ಯಾದಿ ನೆರವನ್ನು ನೀಡುತ್ತಿದೆ ಎಂದು ಆಮೆರಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಲವಾರು ಲೇಖನಗಳು ಆರೋಪಿಸಿವೆ.

“ಭಯೋತ್ಪಾದನೆ ಮತ್ತು ಉಗ್ರವಾದದ ಅಪಾಯಗಳಿಂದ ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವವುದಕ್ಕಾಗಿ ನಾವು ನಮ್ಮ ನೆರೆಯ ರಿಯಾದ್‌ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡು ಅದರೊಂದಿಗಿನ ನಮ್ಮ ಗಡಿಯನ್ನು ನಾವು ಮುಚ್ಚಿದ್ದೇವೆ’ ಎಂದು ರಿಯಾಧ್‌ ಹೇಳಿರುವುದಾಗಿ ಸೌದಿ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.

ಕತಾರ್‌ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಕೊಳ್ಳಲು ಕಡಿದುಕೊಳ್ಳಲು ರಿಯಾಧ್‌ ನಿರ್ಧರಿಸಿದ್ದು ಕತಾರ್‌ ಜತಗಿನ ಭೂ, ಸಮುದ್ರ ಗಡಿಗಳನ್ನು ಹಾಗೂ ವಾಯು ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಗಿರುವುದಾಗಿ ಸೌದಿ ಅಧಿಕಾರಿಗಳನ್ನು ಉಲ್ಲೇಖೀಸಿ ಎಸ್‌ಪಿಎ ವರದಿ ಮಾಡಿದೆ.

ಕತಾರ್‌ ಅಧಿಕಾರಿಗಳು ಕಳೆದ ಕೆಲವು ವರ್ಷಗಳಿಂದ ಸಾರಾಸಗಟು ಉಲ್ಲಂಘನೆ ಎಸಗುತ್ತಿರುವುದೇ ಈ ನಿರ್ಣಾಯಕ ಕ್ರಮಕ್ಕೆ ಕಾರಣ ಎಂದು ಸೌದಿ ಹೇಳಿಕೆ ತಿಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next