Advertisement

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

02:30 PM Dec 23, 2024 | Team Udayavani |

ಮುಂಬೈ: ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy) ಕೂಟದ ತಾತ್ಕಾಲಿಕ ವೇಳಾಪಟ್ಟಿಯೊಂದು ಬಿಡುಗಡೆಯಾಗಿದೆ. ಹೈಬ್ರಿಡ್‌ ಮಾದರಿಯಲ್ಲಿ ಕೂಟ ನಡೆಯುವುದು ಇದೀಗ ಅಧಿಕೃತವಾಗಿದ್ದು, ಭಾರತದ ಪಂದ್ಯಗಳು ಯುಎಇ ನಲ್ಲಿ ನಡೆಯಲಿದೆ.

Advertisement

ಪಾಕಿಸ್ತಾನ ಮತ್ತು ಭಾರತ ನಡುವಿನ ಲೀಗ್ ಪಂದ್ಯ ಫೆಬ್ರವರಿ 23 ರಂದು ಭಾನುವಾರ ನಡೆಯಲಿದೆ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತದ ಗುಂಪಿನಲ್ಲಿರುವ ಇತರ ಎರಡು ತಂಡಗಳೆಂದರೆ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್. ಭಾರತ‌ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶವನ್ನು ಮತ್ತು ಮಾರ್ಚ್ 2 ರಂದು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆಯಿದೆ.

ಹಾಲಿ ಚಾಂಪಿಯನ್ ಪಾಕಿಸ್ತಾನವು ಫೆಬ್ರವರಿ 19 ರಂದು ಕರಾಚಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದೊಂದಿಗೆ ಕೂಟ ಪ್ರಾರಂಭಿಸಲಿದೆ. ಪಾಕಿಸ್ತಾನದ ಕೊನೆಯ ಲೀಗ್ ಪಂದ್ಯ ಬಾಂಗ್ಲಾದೇಶ ವಿರುದ್ಧ ಫೆಬ್ರವರಿ 27 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ.

ಎರಡನೇ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಿವೆ. ಭಾರತದ ಆಟಗಳನ್ನು ಹೊರತುಪಡಿಸಿ ಎರಡೂ ಗುಂಪುಗಳ ಪಂದ್ಯಗಳು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಆಡಲಾಗುತ್ತದೆ.

Advertisement

ಎರಡು ಸೆಮಿಫೈನಲ್‌ಗಳನ್ನು ಮಾರ್ಚ್ 4 ರಂದು (ಮೀಸಲು ದಿನವಿಲ್ಲದೆ) ಮತ್ತು ಮಾರ್ಚ್ 5 ರಂದು (ಮೀಸಲು ದಿನದೊಂದಿಗೆ) ನಿಗದಿಪಡಿಸಲಾಗಿದೆ. ಮಾರ್ಚ್ 9 ರಂದು ನಡೆಯುವ ಫೈನಲ್‌ ಗೆ ಮೀಸಲು ದಿನವೂ ಇದೆ. ಭಾರತ ಅರ್ಹತೆ ಪಡೆದರೆ ಮೊದಲ ಸೆಮಿಫೈನಲ್ ಯುಎಇಯಲ್ಲಿ ಆಡಲಾಗುತ್ತದೆ. ಭಾರತ ಅರ್ಹತೆ ಪಡೆಯದಿದ್ದರೆ ಪಾಕಿಸ್ತಾನದಲ್ಲಿ ಈ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯವನ್ನು ಲಾಹೋರ್‌‌ ನಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ಒಂದು ವೇಳೆ ಭಾರತ ಫೈನಲ್‌ ಪ್ರವೇಶ ಮಾಡಿದರೆ ಆಗ ಪಂದ್ಯ ಯುಎಇ ನಲ್ಲಿ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next