ಬಹ್ರೈನ್: ಅಮ್ಮ ಕಲಾವಿದರು ಬಹ್ರೈನ್ ಪ್ರದರ್ಶಿಸಲಿರುವ ನಾಡಿನ ಖ್ಯಾತ ನಾಟಕಕರ್ತ ದಿನಕರ ಭಂಡಾರಿ ಕಣಂಜಾರು ವಿರಚಿತ ತುಳು ನಾಟಕ “ಮದಿಮೆದ ಇಲ್ಲಡ್’ ಇದರ ಮುಹೂರ್ತ ಪೂಜೆಯು ಇತ್ತೀಚೆಗೆ ಬಹ್ರೈನ್‌ನ ಕನ್ನಡ ಭವನದಲ್ಲಿ ಜರಗಿತು. ರಾಮ ಪ್ರಸಾದ ಅಮ್ಮೆನಡ್ಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ನಾಟಕ ಮುಹೂರ್ತಕ್ಕೆ ಶುಭ ಹಾರೈಸಿದರು.
ಮೋಹನದಾಸ್ ರೈ ಎರಂಬು ಸಾರಥ್ಯದಲ್ಲಿ ಅಮ್ಮ ಕಲಾವಿದರ ವೇದಿಕೆಯು ದ್ವೀಪ ರಾಷ್ಟ್ರ ಬಹ್ರೈನ್‌ನಲ್ಲಿ ಹಲವಾರು ವರುಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು, “ಮದಿಮೆದ ಇಲ್ಲಡ್’ ನಾಟಕವು ದ್ವೀಪದ ಕಲಾ ಪ್ರೇಮಿಗಳಿಗೆ ಅಮ್ಮ ಕಲಾವಿದರು ಸಂಘಟನೆಯ ಇನ್ನೊಂದು ಕೊಡುಗೆಯಾಗಿದೆ.
ಈ ನಾಟಕವನ್ನು ದ್ವೀಪದ ಪ್ರತಿಭಾವಂತ ನಿರ್ದೇಶಕರಾದ ಪುಷ್ಪರಾಜ್ ಶೆಟ್ಟಿ ಕಾಸರಗೋಡು ಮತ್ತು ಕರುಣಾಕರ ಪದ್ಮಶಾಲಿಯವರು ನಿರ್ದೇಶಿಸಲಿದ್ದು ನಾಟಕವು 2025ರ ಫೆ.14ರಂದು ಮನಾಮ ಇಂಡಿಯನ್ ಕ್ಲಬ್‌ನ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರಸಕ್ತ ಅಮ್ಮ ಕಲಾವಿದರು ಬಹ್ರೈನ್‌ನ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದು, ದಿಯಾರ್ ಮೊಹರಾಕ್‌ನ ಸಿ.ಎಫ್.ಒ ಸುಭಾಷ್ ಚಂದ್ರ, ಕನ್ನಡ ಸಂಘದ ಕಾರ್ಯದರ್ಶಿ ರಾಮ್ ಪ್ರಸಾದ್ ಭಟ್ ಅಮ್ಮೆನಡ್ಕ, ಬಹ್ರೈನ್ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹ್ರೈನ್ ಸೌದಿ ಘಟಕದ ನೂತನ ಅಧ್ಯಕ್ಷ ದೀಪಕ್ ರಾವ್ ಪೇಜಾವರ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹ್ರೈನ್ ಸೌದಿ ಘಟಕದ ಮಾಜಿ ಅಧ್ಯಕ್ಷ ನರೇಂದ್ರ ಶೆಟ್ಟಿ, ಬಹ್ರೈನ್ ಬಿಲ್ಲವಾಸ್‌ನ ಅಧ್ಯಕ್ಷ ಹರೀಶ್ ಪೂಜಾರಿ, ರಾಯಲ್ ತುಳುಕೂಟದ ಸ್ಥಾಪಕ ಅಧ್ಯಕ್ಷ ಕರ್ಮಾರ್ ನಾಗೇಶ್ ಶೆಟ್ಟಿ , ವಿಶ್ವಕರ್ಮ ಸಂಘಟನೆಯ ಅಧ್ಯಕ್ಷ ಸತೀಶ್ ಆಚಾರ್ಯ, ಮೊಗವೀರ್ಸ್ ಬಹ್ರೈನ್‌ನ ಮಾಜಿ ಅಧ್ಯಕ್ಷ ಚಂದ್ರ ಮೆಂಡನ್, ಕುಲಾಲ್ ಬಹ್ರೈನ್ ನ ಅಧ್ಯಕ್ಷ ಗಣೇಶ್ ಕುಲಾಲ್ ಮಾಣಿಲ ಹಾಗೂ ವಿವಿಧ ಗಣ್ಯರುಗಳು ಈ ನಾಟಕ ಮುಹೂರ್ತದಲ್ಲಿ ಪಾಲ್ಗೊಂಡು ಮಾತನಾಡಿ ಶುಭ ಹಾರೈಸಿದರು.
ಈ ನಾಟಕದಲ್ಲಿ ಪಾತ್ರವಹಿಸುವ ಕಲಾವಿದರುಗಳಿಗೆ ಅಮ್ಮ ಕಲಾವಿದರು ಸಂಘಟನೆಯ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿಯವರು ನಾಟಕದ ಪ್ರತಿಗಳನ್ನು ನೀಡಿ ಶುಭ ಹಾರೈಸಿದರು. ಯಕ್ಷಿತ್ ಶೆಟ್ಟಿಯವರು ಕಾರ್ಯಕ್ರಮವನ್ನ ನಿರೂಪಿಸಿ, ಪ್ರವೀಣ್ ಶೆಟ್ಟಿ ಕಿನ್ನಿಗೋಳಿಯವರು ಧನ್ಯವಾದ ಸಮರ್ಪಿಸಿದರು.
ವರದಿ-ಕಮಲಾಕ್ಷ ಅಮೀನ್