ಮುಂಬಯಿ: ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಣ್ಬೀರ್ ಕಪೂರ್ ಅವರ ʼ ಅನಿಮಲ್ʼ ಸಟ್ಟೇರಿದ ದಿನದಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಡೇಟ್ ನಂತಯೇ ತೆರೆಗೆ ಬರಬೇಕು ಎನ್ನುವಾಗಲೇ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ಸಿನಿಮಾದ ಚಿತ್ರೀಕರಣ ಇದೇ ವರ್ಷದ ಏಪ್ರಿಲ್ ನಲ್ಲಿ ಮನಾಲಿ, ಹಿಮಾಚಲ ಪ್ರದೇಶದಲ್ಲಿ ಶುರುವಾಗಿತ್ತು. ಬಹುತೇಕ ಸಿನಿಮಾದ ಎಲ್ಲಾ ಕೆಲಸಗಳು ಪೂರ್ತಿಗೊಂಡಿದ್ದು, ಇತ್ತೀಚೆಗೆ ರಣ್ಬೀರ್ ಕಪೂರ್ ಹಿಂದೆಂದೂ ಕಾಣಿಸಿಕೊಳ್ಳದ ಮಾಸ್ ಅವತಾರವುಳ್ಳ ಪೋಸ್ಟರ್ ವೊಂದನ್ನು ಸಿನಿಮಾ ತಂಡ ರಿವೀಲ್ ಮಾಡಿತ್ತು. ಈ ಪೋಸ್ಟರ್ ವೈರಲ್ ಆಗಿತ್ತು. ಸಿನಿಮಾವನ್ನು ಥಿಯೇಟರ್ ನಲ್ಲಿ ಆದಷ್ಟು ಬೇಗ ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವುದರಿಂದ ಸಿನಿಮಾ ಆಗಸ್ಟ್ ನಲ್ಲಿ ರಿಲೀಸ್ ಆಗಲ್ಲ ಎಂದು ವರದಿ ತಿಳಿಸಿದೆ. ಇದರಿಂದ ಅದೇ ಸಮಯದಲ್ಲಿ ರಿಲೀಸ್ ಆಗಬೇಕಿದ್ದ ಅಕ್ಷಯ್ ಕುಮಾರ್ ಅವರ ʼಓ ಮೈ ಗಾಡ್ -2ʼ, ಹಾಗೂ ಸನ್ನಿ ಡಿಯೋಲ್ ಅವರ ʼಗದರ್ 2ʼ ಸಿನಿಮಾದೊಂದಿಗಿನ ಕ್ಲ್ಯಾಶ್ ತಪ್ಪಿದಂತಾಗಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಸಿನಿಮಾ ರಿಲೀಸ್ ಆಗಬೇಕಿರುವ ಹೊಸ ದಿನಾಂಕವನ್ನು ಶೀಘ್ರದಲ್ಲಿ ಅನೌನ್ಸ್ ಮಾಡಲಾಗುದೆಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ರಣಬೀರ್ ಕಪೂರ್ ಯೊಂದಿಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ʼಅನಿಮಲ್ʼ ಸಿನಿಮಾದಲ್ಲಿ ನಟಿಸಿದ್ದಾರೆ.