Advertisement
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ (Shiva Rajkumar) ನಟನೆಯ ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಮೂಲಕ ʼಮಫ್ತಿʼ ಪ್ರೀಕ್ವೆಲ್ಗೂ ಪ್ರೇಕ್ಷಕರು ಜೈಕಾರ ಹಾಕಿದ್ದರು.
Related Articles
Advertisement
ಶಿವರಾಜ್ ಕುಮಾರ್ ಅವರ ಮಾಸ್ ಲುಕ್ ನೋಡಿ ಫ್ಯಾನ್ಸ್ಗಳು ಫಿದಾ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ʼಭೈರತಿ ರಣಗಲ್ʼ ಬ್ಲಾಕ್ ಬಸ್ಟರ್ ಹಿಟ್ ತಂದುಕೊಟ್ಟಿತು. ಇದೀಗ ಸಿನಿಮಾ ರಿಲೀಸ್ ಆಗಿ 40 ದಿನಕ್ಕೆ ʼಭೈರತಿ ರಣಗಲ್ʼ ಓಟಿಟಿ ಅಖಾಡಕ್ಕೆ ಕಾಲಿಡಲಿದೆ.
ಮಾಸ್ ಲೀಡರ್ ಈಗ ಪ್ರೈಮ್ ಲೀಡರ್ ಆಗಲು ಸಿದ್ಧರಾಗಿದ್ದಾರೆ ಎಂದು ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಡಿ.25 ಅಂದರೆ ನಾಳೆಯಿಂದಲೇ ʼಭೈರತಿ ರಣಗಲ್ʼ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆ ಮೂಲಕ ಕ್ರಿಸ್ಮಸ್ ಹಾಲಿಡೇಗೆ ಸಿನಿಮಂದಿಗೆ ಭರ್ಜರಿ ಮನರಂಜನೆ ಸಿಗಲಿದೆ.