ನಾಗ್ಪುರ: ʼಪುಷ್ಪ-2ʼ ಸಿನಿಮಾ ವೀಕ್ಷಣೆ ವೇಳೆಯೇ ಪೊಲೀಸರು ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಒಬ್ಬನನ್ನು ಬಂಧಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದ್ದು, ರಿಯಲ್ ಲೈಫ್ ಸೀನ್ ನೋಡಿ ಪ್ರೇಕ್ಷಕರು ಶಾಕ್ ಆಗಿದ್ದಾರೆ.
ವಿಶಾಲ್ ಮೆಶ್ರಾಮ್ ಬಂಧಿತ ಆರೋಪಿ.
ವಿಶಾಲ್ ಮೆಶ್ರಾಮ್ ಮೇಲೆ ಎರಡು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 27 ಪ್ರಕರಣಗಳಿವೆ. ಪೊಲೀಸರ ಮೇಲೂ ಈತ ಹಲ್ಲೆ ನಡೆಸಿದ್ದ ಎನ್ನಲಾಗಿದೆ. 10 ತಿಂಗಳಿನಿಂದ ಪರಾರಿಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಸೈಬರ್ ಕಣ್ಗಾವಲು ಮತ್ತು ಹೊಸ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಯಲ್ಲಿ ಅವನ ಚಲನವಲನಗಳನ್ನು ಟ್ರ್ಯಾಕ್ ಮಾಡಿದ್ದು, ಥಿಯೇಟರ್‌ನಲ್ಲಿ ʼಪುಷ್ಪ-2ʼ ಸಿನಿಮಾ ಕ್ಲೈಮ್ಯಾಕ್ ಸೀನ್ ವೇಳೆಯೇ ಪೊಲೀಸರು ಒಳಗೆ ಹೋಗಿ ಮೆಶ್ರಾಮ್‌ನನ್ನು ಬಂಧಿಸಿದ್ದಾರೆ.
ಥಿಯೇಟರ್ ಒಳಗೆ ಹೋಗುವ ಮುನ್ನ ಪೊಲೀಸರು ಆರೋಪಿಯ ವಾಹನದ ಟೈರ್‌ಗಳ ಗಾಳಿಯನ್ನು ತೆಗೆದಿದ್ದಾರೆ. ಆ ಬಳಿಕ ಪ್ಲ್ಯಾನ್ ಮಾಡಿಕೊಂಡು ಥಿಯೇಟರ್ ಒಳಗೆ ಹೋಗಿ ಬಂಧಿಸಿದ್ದಾರೆ.
ಏಕಾಏಕಿ ಪೊಲೀಸರು ಥಿಯೇಟರ್ ಒಳಗೆ ಬಂದ ಕಾರಣ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಪ್ರೇಕ್ಷಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಸದ್ಯ ಆರೋಪಿಯನ್ನು ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು ಶೀಘ್ರದಲ್ಲೇ ನಾಸಿಕ್ ಜೈಲಿಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.