Advertisement

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

12:07 PM Dec 22, 2024 | Team Udayavani |

“ಪುಷ್ಪ-2′ ಚಿತ್ರ ಸಂಕ್ರಾಂತಿ ವೇಳೆಗೆ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ, ಈಗ ಅದು ಸುಳ್ಳಾಗಿದೆ. ಚಿತ್ರ ಫೆಬ್ರವರಿವರೆಗೂ ಓಟಿಟಿಗೆ ಬರುವುದಿಲ್ಲ. ಹಬ್ಬದ ಸೀಸನ್‌ನಲ್ಲೂ ಈ ಚಿತ್ರ ಚಿತ್ರಮಂದಿರದಲ್ಲಿ ಇರಲಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ ಸ್ಪಷ್ಟನೆ ನೀಡಿದೆ.

Advertisement

“ಪುಷ್ಪ-2 ಬೇಗನೇ ಓಟಿಟಿಗೆ ಬರುತ್ತದೆ ಎಂಬ ಗಾಳಿಸುದ್ದಿ ಓಡುತ್ತಿದೆ. ಆದರೆ, ಈ ಚಿತ್ರ ಹಬ್ಬದ ಸೀಸನ್‌ ನಲ್ಲೂ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಖುಷಿ ನೀಡಲಿದೆ’ ಎಂದಿದೆ.

ಜೊತೆಗೆ 56 ದಿನಗಳ ಮುಂಚೆ ಯಾವ ಕಾರಣಕ್ಕೂ “ಪುಷ್ಪ-2′ ಓಟಿಟಿಗೆ ಬರುವುದಿಲ್ಲ ಎನ್ನುವ ಮೂಲಕ ಓಟಿಟಿ ಪ್ರಿಯರನ್ನು ನಿರಾಶೆಗೊಳಿಸಿದೆ. ಈ ಚಿತ್ರದ ಓಟಿಟಿ ಹಕ್ಕನ್ನು ನೆಟ್‌ ಫ್ಲಿಕ್ಸ್‌ 270 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next