ಮುಂಬೈ: ಬಾಲಿವುಡ್ ನ ಪ್ರಣಯ ಪಕ್ಷಿಗಳಾಗಿದ್ದ ನಟಿ ಮಲೈಕಾ ಅರೋರಾ(Malaika Arora) ಮತ್ತು ಅರ್ಜುನ್ ಕಪೂರ್(Arjun Kapoor) ಅವರು ಅಕ್ಟೋಬರ್ ನಲ್ಲಿ ಬ್ರೇಕಪ್ ಆಗಿರುವ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.
ಸಂಬಂಧದ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದ ಅರ್ಜುನ್ ‘ನಾನು ಒಂಟಿಯಾಗಿದ್ದೇನೆ’ ಎಂದು ಘೋಷಿಸಿದ್ದರು. ಅಂದಿನಿಂದ ಅರ್ಜುನ್ ಈ ವಿಷಯದ ಬಗ್ಗೆ ಮೌನವಾಗಿದ್ದರೂ, ಕೊನೆಗೂ ಮಲೈಕಾ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ”ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಮತ್ತು ಸಾರ್ವಜನಿಕ ಚರ್ಚೆಯಿಂದ ದೂರವಿರಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಇಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಮಲೈಕಾ ಅವರು ಅರ್ಜುನ್ ಅವರ ಸಾರ್ವಜನಿಕ ಹೇಳಿಕೆ ಉದ್ದೇಶಿಸಿ ಪ್ರತಿಕ್ರಿಯಿಸಿದ್ದು” ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ನಾನು ಎಂದಿಗೂ ಸಾರ್ವಜನಿಕ ವೇದಿಕೆಯನ್ನು ಆಯ್ಕೆ ಮಾಡುವುದಿಲ್ಲ. ಅರ್ಜುನ್ ಏನು ಹೇಳಿದ್ದರೂ ಅದು ಸಂಪೂರ್ಣವಾಗಿ ಅವರ ಹಕ್ಕು” ಎಂದಿದ್ದಾರೆ.
ಮಲೈಕಾ ಅರೋರಾ ಅವರು ಮಾಜಿ ಪತಿ ಅರ್ಬಾಜ್ ಖಾನ್‌ನಿಂದ 2017 ರ ವಿಚ್ಛೇದನ ಪಡೆದ ನಂತರ 2018 ರಲ್ಲಿ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದ್ದರು. ಜೋಡಿ ತಮ್ಮ ಸಂಬಂಧವನ್ನು Instagram-2019 ರಲ್ಲಿ ಅಧಿಕೃತಗೊಳಿಸಿ ಅದನ್ನು ಸಾರ್ವಜನಿಕವಾಗಿ ಚರ್ಚಿಸಲು ಮುಕ್ತರಾಗಿದ್ದರು.